ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಸಣ್ಣ ಕತೆಗಳು. ಈಗ ಕನ್ನಡಕ್ಕೆ ಅನುವಾದಗೊಂಡಿವೆ. ಪುಸ್ತಕಗಳು ಈಗಾಗಲೇ ಲಭ್ಯವಿದೆ. ಆಸಕ್ತರು ಖರೀದಿಸಬಹುದು.
'ಕಕ್ಕೆ ಹೂ ನೆರಳಲ್ಲಿ ನಾನು' (Laburnum for my Head), ಶುದ್ಧ ಕಾಲ್ಪನಿಕ ಕಥೆಯಿಂದ ಆಧುನಿಕ ಸಣ್ಣಕಥೆಗಳವರೆಗಿನ ಸಣ್ಣಕಥೆಗಳನ್ನು ಒಳಗೊಂಡ ಸಂಕಲನವಾಗಿದೆ. ಇಲ್ಲಿಯ ಕಥೆಗಳು ಹೃದಯವಿದ್ರಾವಕ, ಜಾಣ್ಮೆ ಹಾಗೂ ವ್ಯಂಗ್ಯದಿಂದ ಕೂಡಿದ ಕಥೆಗಳಾಗಿದ್ದು, ಮಾನವನ ಸ್ಥಿತಿಗತಿಯ ಆಳವಾದ ಅನುಭವವನ್ನು ಹೊರಸೂಸುತ್ತವೆ.
ಅಸ್ಸಾಮ್ ರಾಜ್ಯದ ಜೋರ್ಹಾಟ್ನಲ್ಲಿ ಜನಿಸಿದ ತಮ್ಸುಲಾ ಆವ್ ಅವರು ನಾರ್ಥ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.