Anantha Kunigal
ಕಾಡ್ಗಿಚ್ಚು
ಕಾಡ್ಗಿಚ್ಚು
Publisher -
- Free Shipping Above ₹300
- Cash on Delivery (COD) Available
Pages - 152
Type - Paperback
Couldn't load pickup availability
"ನೀವ್ಯಾಕೆ ಕಾಡಲ್ಲಿದ್ದೀರಿ? ಎಲ್ರು ಥರ ಊರಲ್ಲೇ ಇರಬೋದು ಅಲ್ವಾ? ಯಾರಾದ್ರು ಮೋಸ ಮಾಡಿದ್ರೆ ಪೋಲೀಸ್ ಕಂಪ್ಲೇಂಟ್ ಕೊಡಿ. ಅವು ನ್ಯಾಯ ಕೊಡುಸ್ತಾರೆ" ಅಗಸ್ತ್ಯನ ಮಾತು ನ್ಯಾಯಬದ್ಧವಾಗಿತ್ತು.
"ಅಗಸ್ಯ ನಿನಗೆ ಇನ್ನೂ ವಾಸ್ತವ ಅರ್ಥ ಆಗಿಲ್ಲ. ನಮಗೂ ಊರು, ಮನೆ, ಕುಟುಂಬ ಎಲ್ಲ ಇದೆ. ಆದ್ರೂ ಅವನ್ನೆಲ್ಲ ಬಿಟ್ಟು ಕಾಡಲ್ಲಿದ್ದೀವಿ ಅಂದ್ರೆ.. ಊರಲ್ಲಿ ನಮಗೆ ಯಾರೂ ನ್ಯಾಯ ಕೊಡಿಸೋರು ಇಲ್ಲ ಅಂತ ಅರ್ಥ. ಒಬ್ರು ಇಬ್ರು ಮೋಸ ಮಾಡಿದ್ರೆ ಕಂಪ್ಲೇಂಟ್ ಕೊಡಬಹುದು. ಆದ್ರೆ ಇಡೀ ಸಮಾಜನೇ ಮೋಸ ಮಾಡಿದೆಯಲ್ಲಾ.. ಯಾರಿಗೆ ಕಂಪ್ಲೇಂಟ್ ಕೊಡೋದು? ಅಷ್ಟಕ್ಕೂ ನನ್ನೊಬ್ಬನಿಗೆ ನ್ಯಾಯ ಸಿಕ್ರೆ ಸಾಕಾ? ನನ್ ಸುತ್ತಮುತ್ತ ಎಷ್ಟೊಂದು ಜನಕ್ಕೆ ನ್ಯಾಯ ಸಿಗಬೇಕಾಗಿದೆ. ಅವರೆಲ್ಲರ ಪರವಾಗಿ ನಾವು ಕಾಡಲಿದ್ದುಕೊಂಡು ಹೋರಾಟ ಮಾಡ್ತಿದ್ದೀವಿ ಅಷ್ಟೇ.." ಕ್ಯಾಪ್ಟನ್ ಮಾತುಗಳಲ್ಲಿ ಆವೇಶ ತುಂಬಿತ್ತು.
"ಹೋರಾಟಕ್ಕೆ ಬಂದೂಕು ಬೇಕೇ ಬೇಕಾ??" ಅಗಸ್ಯ ಕೇಳಿದ.
ಕ್ಯಾಪ್ಟನ್ ನಸುನಗುತ್ತಾ "ಪೆನ್ನು ಮತ್ತೆ ಪೇಪರ್ ನಮಗೆ ಆಯುಧಗಳು. ಈ ಬಂದೂಕು ಆತ್ಮ ರಕ್ಷಣೆಗೆ ಅಷ್ಟೇ.. ನಾವು ಯಾರಿಗೂ ತೊಂದ್ರೆ ಮಾಡೋದಿಲ್ಲ. ಆಗಲೇಬೇಕಾದ ಕೆಲವು ವಿಷಯಗಳಲ್ಲಿ ಒತ್ತಾಯ ಮಾಡೋದರ ಮೂಲಕ ನಿದ್ದೆ ಮಾಡೋ ಸರ್ಕಾರಗಳನ್ನ ಎಚ್ಚರಿಸ್ತೀವಿ. ಬಹಳ ನೊಂದವರು ನನ್ ಜೊತೆಗಿದ್ದಾರೆ.. ಅವ್ರಿಗೆಲ್ಲ ನ್ಯಾಯ ಸಿಕ್ಕಿದಮೇಲೆ ನಾವು ಈ ಕಾಡು ಬಿಡ್ತೀವಿ" ಎಂದ. ಈ ಮಾತಿಗೆ ಕಾಡು ನಿಶ್ಯಬ್ದವಾಯಿತು!
Author's Interview: https://youtu.be/Z8Vg-dQOIJs
Share


Subscribe to our emails
Subscribe to our mailing list for insider news, product launches, and more.