Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಜಲಪ್ರಳಯ"ದ ಲೇಖನಗಳು ಅನುಭವದ ಮೂಸೆಯಿಂದಲೆ ಹೊರಬಂದು ಸುಲಲಿತವಾಗಿ, ಓದಿಸಿಕೊಂಡು ಹೋಗುವುದಲ್ಲದೆ ಕೆಲವರ ಮುಖವಾಡಗಳನ್ನು ಮುಲಾಜಿಲ್ಲದೆ ಕಳಚಿ ಹಾಕಿವೆ. ಇದ್ದದ್ದನ್ನು ಇದ್ದಂತೆ ಹೇಳುವಾಗ ಕೆಲವರ ಮನಸಿಗೆ ನೋವಾಗುವುದು ಸಹಜ. ಸಮಾಜ ಸೇವೆಯ ನೆಪದಲ್ಲಿ ಸುಲಿಗೆಗಿಳಿದವರ ಕುರಿತು, ಬೆಂಕಿ ಬಿದ್ದ ಮನೆಯಿಂದ ಗಳ ಹಿರಿಯುವವರ ಕುರಿತು, ಬಾಯಿಗೆ ಹೊಲಸು ಮೆತ್ತಿಕೊಂಡು ಭ್ರಷ್ಟರೊಂದಿಗೆ ಕೈ ಜೋಡಿಸುವವರ ಕುರಿತು ಇಲ್ಲಿನ ಲೇಖನಗಳು ಜೀವಂತಿಕೆ ಉಳಿಸಿಕೊಂಡಿವೆ. ತನಗನಿಸಿದ್ದನ್ನು ಮಾರ್ಮಿಕವಾಗಿ ಮುಟ್ಟಿಸಬೇಕಾದವರಿಗೆ ಮುಟ್ಟಿಸಿ, ಪಟ್ಟಭದ್ರರ ಟೊಳ್ಳುತನವನ್ನು ಬಯಲು ಮಾಡುತ್ತಾ ಈ ಪುಸ್ತಕ ಒಂದಷ್ಟು ಸುದ್ದಿ ಮಾಡಲಿದೆ ಜೊತೆಗೆ ಪ್ರಾಮಾಣಿಕ ಸಮಾಜ ಸೇವಕರಿಗೆ ಒಂದಷ್ಟು ಧೈರ್ಯವನ್ನು, ಆತ್ಮವಿಶ್ವಾಸವನ್ನೂ ನೀಡಲಿದೆ ಎಂಬ ನಂಬಿಕೆ ನನ್ನದು.
Be the first to know about new collections and special offers.