Skip to product information
1 of 1

Dr. K. N. Ganeshaiah

ಜಲ-ಜಾಲ

ಜಲ-ಜಾಲ

ಪ್ರಕಾಶಕರು - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 152

Type - Paperback

Pickup available at 67, South Avenue Complex, DVG Road, Basavanagudi

Usually ready in 24 hours

ಸೀಶೆಲ್ಸ್‌ನಿಂದ ಮಾರಿಷಿಯಸ್‌ ಕಡೆಗೆ ಸಾಗುತ್ತಿದ್ದ ಭಾರತದ ವ್ಯಾಪಾರಿ ಹಡಗಿನ ಸಿಬ್ಬಂದಿ ಸಮುದ್ರದ ಮೇಲೆ ಪ್ರಾಣಾಪಾಯದಲ್ಲಿದ್ದ ವ್ಯಕ್ತಿಯೊಬ್ಬನನ್ನು ಕಾಪಾಡಿ ಭಾರತಕ್ಕೆ ಕರೆತರುತ್ತಾರೆ. ಆದರೆ ಯಾವ ಭಾಷೆಗೂ ಸ್ಪಂದಿಸದ ಆ ವ್ಯಕ್ತಿಯ ರಹಸ್ಯವನ್ನು ಬಿಡಿಸಲಾಗದೆ ಕೋಸ್ಟ್‌ಗಾರ್ಡ್ ತಬ್ಬಿಬ್ಬಾಗುತ್ತಾರೆ.

ಹಿಂದೂ ಮಹಾಸಾಗರದ ಮೇಲೆ ಕಣ್ಣಿಟ್ಟಿದ್ದ ಚೀನಾದ ಮಿಲಿಟರಿ ಸ್ಯಾಟಲೈಟ್‌ನ ಕ್ಯಾಮೆರಾಗಳಲ್ಲಿ ಅಕಸ್ಮಾತ್ ಆಗ ಸೆರೆಯಾದ ಕೆಲವು ಚಿತ್ರಗಳು ಅವರ ಅಂತಾರಾಷ್ಟ್ರೀಯ ಗೂಢಚರ್ಯೆಯ ಕಾರ್ಯಾಲಯದಲ್ಲಿ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತವೆ.

ಅತ್ತ ಅಮೆರಿಕದಲ್ಲಿ, ಪತ್ರಕರ್ತೆ ಎಲಿನಾಗೆ ಒಂದು ರಹಸ್ಯ ಮೂಲದಿಂದ ದೊರಕಿದ ಸುದ್ದಿಯ ಪ್ರಕಾರ, ಸರಕಾರವು ತನ್ನ ಸೈನಿಕರ ಸಾವಿನ ಬಗ್ಗೆ ಸುಳ್ಳು ವರದಿ ನೀಡುತ್ತಿದೆ ಎಂದು ತಿಳಿದು ಬರುತ್ತದೆ. ಎಲಿನಾ ಅದರ ಬೆನ್ನಟ್ಟಿ ಹೊರಟಾಗ ಕಾಣದ ಕೈಗಳು ಆಕೆಯನ್ನು ತಡೆಯಲು ಪ್ರಯತ್ನಿಸುತ್ತವೆ, ಅವರ ಕಣ್ಣು ತಪ್ಪಿಸಿ ನಡೆಸಿದ ಶೋಧವು ಆಕೆಯನ್ನು, ಸಾವು, ಬದುಕು ಮತ್ತು ಆತ್ಮಹತ್ಯೆಗಳ ನಡುವಿನ ಸಂಬಂಧದ ಬಗ್ಗೆ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳತ್ತ ಕರೆದೊಯ್ಯುತ್ತದೆ.

ಇತ್ತ ಆ ಅನಾಮಧೇಯ ವ್ಯಕ್ತಿಗೆ ರಕ್ಷಣೆ ಕೊಟ್ಟ ಕಾರಣಕ್ಕೆ ಭಾರತ ಸರಕಾರವು ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಎಲಿನಾಳ ಶೋಧದಿಂದಾಗಿ ಭಾರತ ಆ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಹಾಗೂ ಅನಾಮಧೇಯ ವ್ಯಕ್ತಿಯ ರಹಸ್ಯವೂ ಬಯಲಾಗುತ್ತದೆ.

ಎಲಿನಾ ಈ ಕಗ್ಗಂಟನ್ನು ಬಿಡಿಸಿದ ರೀತಿ ಹೇಗೆ ಮತ್ತು ವಿಜ್ಞಾನಿಗಳ ಜೊತೆ ಕೈಜೋಡಿಸಿ ಆಕೆ ತೆರೆದಿಟ್ಟ ರಹಸ್ಯ ಪ್ರಯೋಗದ ವಿವರಗಳು ಏನು? ಎಂಬುದರ ಕುತೂಹಲಕಾರಿ ಕಥನ 'ಜಲ-ಜಾಲ' ದಲ್ಲಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)