to kannada S. Divakar
ಜಗತ್ತಿನ ಅತಿ ಸಣ್ಣ ಕತೆಗಳು
ಜಗತ್ತಿನ ಅತಿ ಸಣ್ಣ ಕತೆಗಳು
Publisher -
- Free Shipping Above ₹400
- Cash on Delivery (COD) Available*
Pages - 145
Type - Paperback
Couldn't load pickup availability
ಪ್ರಪಂಚದ ಅನೇಕ ದೇಶಗಳ ಲೇಖಕರು ಬದುಕಿನ ಅಪೂರ್ವ ಕ್ಷಣಗಳನ್ನು ಹಿಡಿದಿಟ್ಟಿರುವ ಅಪರೂಪದ ಸಂಕಲನ ಈ ಅತಿ ಸಣ್ಣಕತೆಗಳು, ಗಾಬ್ರಿಯೇಲ್ ಗಾರ್ಸಿಯಾ ಮಾರ್ಕೆಸ್, ಹೇನ್ರಿಕ್ ರ್ಕ್ಯೂಲ್, ಯಾಸುನಾರಿ ಕವಾಬಾಟ, ಅರ್ನೆಸ್ಟ್ ಹೆಮಿಂಗ್ವೇ, ಒಕ್ತಾವಿಯೊ ಪಾಜ್, ನಗೀಬ್ ಮಹ್ಫೂಸ್ ಮೊದಲಾದ ನೊಬೆಲ್ ಪ್ರಶಸ್ತಿ ವಿಜೇತರಿಂದ ಹಿಡಿದು ನಾವು ಓದಲೇಬೇಕಾದ, ಓದಿದರೆ ಇನ್ನೂ ಅಷ್ಟು ಓದಬೇಕೆನ್ನಿಸುವ ಇತ್ತೀಚಿನ ಲೇಖಕರವರೆಗೆ ಅನೇಕರು ಸೃಷ್ಟಿಸಿರುವ ಇಲ್ಲಿನ ಕತೆಗಳು ಓದುಗರನ್ನು ಮನುಷ್ಯಲೋಕದ ವಸ್ತುಪ್ರದರ್ಶನವೊಂದರಲ್ಲಿ ಸುತ್ತಾಡಿಸುವಂತಿವೆ.
ಶಬ್ದ-ವಾಕ್ಯಗಳ ದೃಷ್ಟಿಯಿಂದಷ್ಟೇ ಅತಿ ಸಣ್ಣ ಎನ್ನಿಸುವ ಈ ಕತೆಗಳು ಒಂದು ಬೀಜದಲ್ಲಿ ಹೆಮ್ಮರವಿದ್ದಂತೆ, ಬಿಂದುವಿನಲ್ಲಿ ಸಿಂಧುವಿದ್ದಂತೆ, ವ್ಯಕ್ತಿಯಲ್ಲಿ ಸಮಷ್ಟಿಯಿದ್ದಂತೆ. ಎಲ್ಲ ಕತೆಗಳಲ್ಲೂ ಸಾಮಾಜಿಕ, ಮನೋವೈಜ್ಞಾನಿಕ ಅನುರಣನವಿದ್ದು ಅದು ಬಹುಕಾಲ ಓದುಗರನ್ನು ಕಾಡಬಲ್ಲದು. ಹತ್ತು ಹನ್ನೆರಡು ನಿಮಿಷಗಳಲ್ಲಷ್ಟೆ ಓದಿಬಿಡಬಹುದಾದ ಈ ಕತೆಗಳು ಓದುಗರನ್ನು ಅಳಿಸಬಹುದು, ನಗಿಸಬಹುದು, ಭಾವಪರವಶಗೊಳಿಸಬಹುದು, ಚಿಂತಿಸುವಂತೆ ಪ್ರೇರೇಪಿಸಬಹುದು.
ಕನ್ನಡಕ್ಕೆ ತೀರ ಹೊಸದಾಗಿರುವ ಈ ಸಂಕಲನ ಅತ್ಯುತ್ತಮ ಭಾಷಾಂತರಕ್ಕೆ ಹೆಸರಾದ ಎಸ್.ದಿವಾಕರರ ಹತ್ತಾರು ವರ್ಷಗಳ ಪರಿಶ್ರಮದ ಫಲ. ಅವರು ಈ ಸಂಕಲನಕ್ಕೆಂದೇ ವಿಶೇಷವಾಗಿ ಬರೆದಿರುವ ಪ್ರಸ್ತಾವನೆ ಮೊಟ್ಟಮೊದಲ ಬಾರಿಗೆ ಅತಿ ಸಣ್ಣಕತೆಯ ಆಶಯ-ಆಕೃತಿಗಳನ್ನು ಸಮರ್ಥವಾಗಿ ವಿಶ್ಲೇಷಿಸಿದೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.