Prof. B. A. Shreedhara
ಇಳೆಯ ಬೆಳಗು
ಇಳೆಯ ಬೆಳಗು
Publisher -
- Free Shipping Above ₹400
- Cash on Delivery (COD) Available*
Pages - 208
Type - Paperback
Couldn't load pickup availability
ಸತ್ಯದ ಹುಡುಕಾಟ- ಮನುಕುಲದ ಚಿಂತನೆಯ ಹೊಳೆಯು ಸದಾ ಹರಿಯುವಂತೆ ಮಾಡಿರುವ ಚಾಲಕ ಶಕ್ತಿ. ಮಾನವ ಇತಿಹಾಸದಷ್ಟೇ ಪುರಾತನವಾದ ಈ ಹುಡುಕಾಟವೇ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುವ, ಅಜ್ಞಾನವನ್ನು ಕಳೆದು ಮನುಕುಲವನ್ನು ಸಂಕಲೆಗಳಿಂದ ವಿಮೋಚನೆ ಗೊಳಿಸುವ ಸಾಧನ. ಈ ನಿಟ್ಟಿನಲ್ಲಿ ಪ್ರೊ. ಬಿ.ಎ. ಶ್ರೀಧರ ಅವರ 'ಇಳೆಯ ಬೆಳಗು' ಮನುಕುಲದ ಚಿಂತನೆಯ ಹರಿವನ್ನು ತಮ್ಮ ಅಪೂರ್ವ ಕಾಣ್ಕೆಯಿಂದ ನಿರ್ದೇಶಿಸಿ ಸತ್ಯದ ಬೆಳಕನ್ನು ಇಳೆಗೆ ತಂದ ಜಗತ್ತಿನ ಆಯ್ದ ಶ್ರೇಷ್ಟ ಚಿಂತಕರ ಮಂಜರಿ. ಚೀನಾದ ಕನ್‌ಫ್ಯೂಶಿಯಸ್, ಗ್ರೀಸಿನ ಸಾಕ್ರೆಟಿಸ್, ಪ್ಲೇಟೋನಿಂದ ಹಿಡಿದು ಆಧುನಿಕ ಅಮೆರಿಕದ ನೋಂ ಚಾಮ್‌ಸ್ಕಿಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಸತ್ಯದ ಹುಡುಕಾಟ ನಡೆಸಿದ ಆಯ್ದ ಐವತ್ತಾರು ದಾರ್ಶನಿಕರ ಬದುಕು, ಸಾಧನೆ ಮತ್ತು ವಿಚಾರಗಳು ಇಲ್ಲಿ ಮಡುಗಟ್ಟಿವೆ. ಜನಮುಖಿ ಪತ್ರಕರ್ತನ ಕ್ರಿಯಾಶೀಲ ದೃಷ್ಟಿ, ಸಂತನ ದರ್ಶನಕೇಂದ್ರಿತ ಮನಸ್ಸು ಮತ್ತು ವಿಜ್ಞಾನಿಯೊಬ್ಬನ ನಿಖರತೆಯಿರುವ ಪ್ರೊ. ಬಿ. ಎ. ಶ್ರೀಧರ ಅವರ ವಿಶಿಷ್ಟ ಚಹರೆಯ ಸುಂದರ ಬರಹಗಳು ಜಗತ್ತಿನ ಚಿಂತನಾಧಾರೆಯನ್ನು ಅರಿಯಲು ದೊರೆತಿರುವ ಮೂಲಭೂತ ಆಕರಗಳೆನಿಸಿವೆ. ಮತ್ತಷ್ಟು ಓದಿಗೆ ಉದ್ದೀಪಿಸುತ್ತವೆ.
- ಕೆ. ಪುಟ್ಟಸ್ವಾಮಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.