Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಈ ಆತ್ಮಕಥನದ ಕೇಂದ್ರ ಇರುವುದು ಯೌವನದ ಅನುರಕ್ತ ಪ್ರೀತಿಯು ಮಾಗಿದ ದಾಂಪತ್ಯವಾಗಿ ಸಂಪೂರ್ಣ ಯಶಸ್ಸು ಪಡೆಯದಿದ್ದರೂ ಪರಸ್ಪರ ಕಾಳಜಿ ಉಳಿಸಿಕೊಂಡ ಸಂಬಂಧವಾಗಿ ಇದು ಪಡೆಯುವ ಯಶಸ್ಸನ್ನು, ಸಾರ್ಥಕತೆಯನ್ನು ಇಂದಿರಾ ಅವರು ವ್ಯಾಖ್ಯಾನಿಸುವ ಪರಿಯಲ್ಲಿ ವಿಷಾದವಿಲ್ಲವೆಂದಲ್ಲ. ಅಸಹನೆಯಿಲ್ಲವೆಂದಲ್ಲ. ಆದರೆ ಇದನ್ನೂ ಮೀರಿದ ನೆಲೆಯಲ್ಲಿ ಲಂಕೇಶರ ಪ್ರತಿಭೆಯನ್ನು, ಅಸಾಧಾರಣ ಸಾಹಸಮಯ ಪ್ರಯೋಗಗಳನ್ನು ಮೆಚ್ಚಿ ಗೌರವಿಸಲು ಸಾಧ್ಯವಾಗುವುದು ಪ್ರೀತಿಯಿಂದಲೋ ಅಥವಾ ಆ ಪ್ರತಿಭೆ ಸಹಜವಾಗಿ ಮತ್ತು ಅನಿವಾರ್ಯ ಹಕ್ಕಿನಿಂದ ಪಡೆಯುವ ಮನ್ನಣೆಯಿಂದಲೋ ಎಂದು ಕೇಳಿದರೆ ಎರಡೂ ಎಂದು ಉತ್ತರಿಸುವುದು ಅನಿವಾರ್ಯವಾಗುತ್ತದೆ. ಗುಪ್ತಗಾಮಿನಿಯಾಗಿ ಹರಿಯುವ ಪ್ರೀತಿಯ ಝಲಕ್ಕುಗಳು ಈ ಕೃತಿಯುದ್ದಕ್ಕೂ ಕಾಣಿಸಿಕೊಳ್ಳುತ್ತವೆ.
ಡಾ.ಎಂ.ಎಸ್.ಆಶಾದೇವಿ
Be the first to know about new collections and special offers.