ಈ ಕಥಾ ಸಂಕಲನದಲ್ಲಿ ಒಟ್ಟು ಏಳು ಕಥೆಗಳಿವೆ. ಈ ಎಲ್ಲಾ ಕಥೆಗಳು ಬದುಕಿನ ಮೌಲ್ಯವನ್ನು ತಿಳಿಸುವ ನಿತ್ಯ ಜೀವನದ ಸತ್ಯ ಕಥೆಗಳಂತೆ ತೋರುತ್ತದೆ. ದಿನನಿತ್ಯದ ಜೀವನಕ್ಕೆ ಹತ್ತಿರವಾಗಿದೆ. ಹಾಗಾಗಿ ಈ ಎಲ್ಲಾ ಕಥೆಗಳು ಓದುಗನಿಗೆ ಆಪ್ತವಾಗುತ್ತದೆ. ಲೇಖಕರು ಏಳು ಕಥೆಗಳ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅವರ ನಿರೂಪಣೆ ಶೈಲಿಯೂ ಅದ್ಬುತವಾಗಿ ಮೂಡಿಬಂದಿದೆ.