ಬದುಕಿನಲ್ಲಿ ಅತಿ ಸಣ್ಣಪುಟ್ಟ ಸಂಗತಿಗಳಲ್ಲಿ ಅಡಗಿರುವ ಸುಖ-ಸಂತೋಷ, ವಿನೋದ, ಹಗುರುತನಗಳು; ಮನುಷ್ಯರ ಉದಾರತೆ, ಸಣ್ಣತನ, ವಿಕಾಲ ಮನೋಭಾವಗಳು ಎಂ. ಆರ್. ಕಮಲ ಅವರ ಇತ್ತೀಚಿನ ಗದ್ಯ ಬರಹಗಳ ಹಿನ್ನೆಲೆಯಾಗಿದೆ.
ಸರಳತೆ ಮತ್ತು ನಿರಾಭರಣ ಚೆಲುವಿನ ಅವರ ಬರಹಗಳ ಗುಣವನ್ನು ಸಹೃದಯ ಓದುಗರು ಹಾಗೂ ಸಾಹಿತ್ಯದ ಗಂಭೀರ ಅಧ್ಯಯನಶೀಲರು ಏಕಕಾಲಕ್ಕೆ ಒಪ್ಪಿಕೊಂಡಿದ್ದಾರೆ.