Skip to product information
1 of 2

Guruprasad Kaginele

ಹಿಜಾಬ್

ಹಿಜಾಬ್

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 310

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ವಲಸೆಯೆನ್ನುವುದು ಇಂದು ಜಗತ್ತಿನಾದ್ಯಂತ ಮನುಷ್ಯರನ್ನು ಕಾಡುವ ಮುಖ್ಯವಾದ ಅನುಭವವಾಗಿದೆ. ಹಳ್ಳಿಗಳಿಂದ ನಗರಕ್ಕೆ ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ಪ್ರತಿನಿತ್ಯ ಲಕ್ಷಾಂತರ ಜನ ಬಗೆಬಗೆಯ ಕಾರಣಗಳಿಗಾಗಿ ವಲಸೆಹೋಗುತ್ತಿದ್ದಾರೆ. ಒಂದೆಡೆಯಿಂದ ಕಿತ್ತು ಇನ್ನೊಂದೆಡೆ ಊರಿಕೊಳ್ಳುವ ಈ ಪ್ರಕ್ರಿಯೆ ಲೋಕದೆಲ್ಲೆಡೆ ಸಂಕಟವನ್ನೂ ಸಂಘರ್ಷವನ್ನೂ ಹುಟ್ಟುಹಾಕಿದೆ. ಜಗತ್ತಿನ ಹಲವಾರು ಮುಖ್ಯ ಲೇಖಕರನ್ನು ಕೆಣಕಿದ. ಅತ್ಯಂತ ಪ್ರಸ್ತುತವಾದ ಈ ವಸ್ತುವನ್ನೆತ್ತಿಕೊಂಡು ಅದನ್ನು ಹಲವು ಕೋನಗಳಿಂದ ಶೋಧಿಸುವ ಮಹತ್ವದ ಕಾದಂಬರಿ 'ಹಿಜಾಬ್'.

ಇಲ್ಲಿ ಆಕಾರ ಪಡೆದಿರುವ ಅನುಭವವು ಕನ್ನಡ ಕಾದಂಬರಿ ಲೋಕವನ್ನು ಮೊದಲ ಬಾರಿಗೆ ಪ್ರವೇಶಿಸುತ್ತಿದೆ. ಇಂಥ ಪ್ರಯೋಗಶೀಲತೆಯಿಂದ ಭಾಷೆ ಮತ್ತು ಸಂಸ್ಕೃತಿಯು ತನಗೆ ಅನ್ಯವಾದದ್ದನ್ನು ಗಳಿಸಿಕೊಳ್ಳುತ್ತದೆ. ಕನ್ನಡದ ಮುಖ್ಯ ಬರಹಗಾರರಲ್ಲೊಬ್ಬರಾದ ಗುರುಪ್ರಸಾದ ಕಾಗಿನೆಲೆ ತಮ್ಮ ಉನ್ನತ ಪ್ರತಿಭೆ ಹಾಗೂ ಬರವಣಿಗೆಯ ಕೌಶಲ್ಯಕ್ಕೆ ನಿದರ್ಶನವೆಂಬಂತೆ ಸಹಜವಾಗಿ ಸುಲಲಿತವಾಗಿ ಓದುಗರನ್ನು ಈ ಕಾದಂಬರಿಯ ಹೊಸ ಪ್ರಪಂಚದಲ್ಲಿ ಓಡಾಡಿಸುತ್ತಾರೆ. ಅದನ್ನು ನಮ್ಮ ಸಂವೇದನೆಯ ಭಾಗವಾಗಿಸುತ್ತಾರೆ.

ವಿವೇಕ ಶಾನಭಾಗ

View full details

Talk about your brand

Share information about your brand with your customers. Describe a product, make announcements, or welcome customers to your store.