Helen Keller, Translated By Shruthi BS
ಹೆಲೆನ್ ಕೆಲ್ಲೆರ್ ನನ್ನ ಬದುಕಿನ ಕಥೆ
ಹೆಲೆನ್ ಕೆಲ್ಲೆರ್ ನನ್ನ ಬದುಕಿನ ಕಥೆ
Publisher -
- Free Shipping Above ₹350
- Cash on Delivery (COD) Available*
Pages - 348
Type - Paperback
Couldn't load pickup availability
"ಯಾವುದೋ ನ್ಯೂನತೆ ಇದ್ದಾಗ ಬದುಕಿನ ಸೌಂದರ್ಯವನ್ನು ನೋಡಲಾಗುವುದಿಲ್ಲ ಎನ್ನುವುದು ನಿಜವಲ್ಲ. ಎಲ್ಲದಕ್ಕೂ ಅದರದ್ದೇ ಆದ ಸೌಂದರ್ಯ ಇರುತ್ತದೆ—ಅಂಧಕಾರ ಹಾಗೂ ನಿಶ್ಯಬ್ದತೆಗೆ ಕೂಡ. ನಾನು ಯಾವ ಸ್ಥಿತಿಯಲ್ಲಿದ್ದೇನೋ ಅದರಲ್ಲಿ ತೃಪ್ತಿಯನ್ನು ಕಂಡುಕೊಳ್ಳುವುದನ್ನು ಕಲಿತಿದ್ದೇನೆ.
ನಿಜ, ಕೆಲವೊಮ್ಮೆ ಒಂಟಿತನ ಶೀತಲ ಮಂಜಿನಂತೆ ನನ್ನನ್ನು ಆವರಿಸುತ್ತದೆ. ಬೆಳಕು, ಸಂಗೀತ, ಮಧುರ ಸಾಂಗತ್ಯವಿರುವ ಬದುಕಿನ ಆ ಕೊಠಡಿ ನನ್ನ ಪಾಲಿಗೆ ಮುಚ್ಚಿಬಿಟ್ಟಿದೆ; ಅದರೊಳಗೆ ಹೋಗಲಾರದೆ ಬಾಗಿಲ ಬಳಿಯೇ ನಿಂತಿದ್ದೇನೆ. ಏನು ಮಾಡುವುದು, ವಿಧಿ ಅಡ್ಡವಾಗಿ ನಿಂತಿದೆ. ಕೆಲವೊಮ್ಮೆ ದೇವರನ್ನು ಪ್ರಶ್ನಿಸಬೇಕೆನಿಸುತ್ತದೆ, ಅವನ ತೀರ್ಪನ್ನು ಟೀಕಿಸಬೇಕೆನಿಸುತ್ತದೆ; ಆದರೆ ನನ್ನ ಬಾಯಿಂದ ಕಹಿ ಶಬ್ದಗಳು ಬರುವುದಿಲ್ಲ. ತುಟಿಯವರೆಗೆ ಬಂದ ಶಬ್ದಗಳು ನನ್ನ ಕಣ್ಣೀರಿನಂತೆಯೇ ಮತ್ತೆ ಹೃದಯದೊಳಗೇ ಹುದುಗಿ ಕುಳಿತುಬಿಡುತ್ತವೆ.
ಮೌನ ನನ್ನಾತ್ಮದಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟಿದೆ. ನಮ್ಮನ್ನು ನಾವು ಮರೆಯುವುದರಲ್ಲೂ ಒಂದು ಸುಖವಿದೆ ಎನ್ನುವುದು ನೆನಪಾಗುತ್ತದೆ. ಹಾಗಾಗಿ ಬೇರೆಯವರ ಕಣ್ಣಲ್ಲಿರುವ ಬೆಳಕೇ ನನ್ನ ಪಾಲಿನ ಸೂರ್ಯ, ಬೇರೆಯವರ ಕಿವಿಯಲ್ಲಿರುವ ಸಂಗೀತವೇ ನನ್ನ ಪಾಲಿನ ಸ್ವರಮೇಳ, ಬೇರೆಯವರ ತುಟಿಯಲ್ಲಿರುವ ನಗುವೇ ನನ್ನ ಪಾಲಿನ ಆನಂದ!"
- ಹೆಲೆನ್ ಕೆಲರ್
Share

Subscribe to our emails
Subscribe to our mailing list for insider news, product launches, and more.