ಹೀಲಿಂಗ್ ಎಂಬ ಚಿಕಿತ್ಸೆ ನೀವೂ ನೀಡಬಲ್ಲಿರಿ

ಹೀಲಿಂಗ್ ಎಂಬ ಚಿಕಿತ್ಸೆ ನೀವೂ ನೀಡಬಲ್ಲಿರಿ

Rs. 250.00
Skip to product information
ಹೀಲಿಂಗ್ ಎಂಬ ಚಿಕಿತ್ಸೆ ನೀವೂ ನೀಡಬಲ್ಲಿರಿ
ಹೀಲಿಂಗ್ ಎಂಬ ಚಿಕಿತ್ಸೆ ನೀವೂ ನೀಡಬಲ್ಲಿರಿ
Sonia Mekwani, Kannada Translationed by: Rajeshwari Jayakrishna
Publisher - ಸಪ್ನ ಬುಕ್ ಹೌಸ್
Type - Paperback
Pages - 245
- Free Shipping Above ₹400

- Cash on Delivery (COD) Available*
Rs. 250.00
Shipping calculated at checkout.

Pickup available at Harivu Books New Shop

Usually ready in 24 hours

View store information

ಹೀಲಿಂಗ್ ಎಂಬ ಚಿಕಿತ್ಸೆ ನೀವೂ ನೀಡಬಲ್ಲಿರಿ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾನೆ, ಹೀಲಿಂಗ್‌ ಅಗತ್ಯವನ್ನು ಮನಗಾಣುತ್ತಾನೆ. ನಮ್ಮೊಳಗೇ ಸುಪ್ತಾವಸ್ಥೆಯಲ್ಲಿರುವ ಹೀಲ‌ರ್ನನ್ನು ಜಾಗೃತಗೊಳಿಸುವುದು ಹೇಗೆ? ಸ್ವತಃ ನಮ್ಮನ್ನು ಮತ್ತು ನಮ್ಮ ಸುತ್ತಲಿನ ಮಂದಿಯನ್ನು ಹೀಲ್ ಮಾಡಬಲ್ಲ ಸಂಪನ್ಮೂಲಗಳು ಯಾವುವು? ನಮ್ಮೊಳಗೇ ಇರುವ ಅವುಗಳನ್ನು ಬಳಸಿಕೊಳ್ಳುವುದು ಹೇಗೆ?

'ಹೀಲಿಂಗ್' ಎಂಬ ಚಿಕಿತ್ಸೆ - ನೀವೂ ನೀಡಬಲ್ಲಿರಿ' ಎಂಬ ಈ ಒಂದು ಸಂಪುಟದಲ್ಲಿ ಮೂರು ಪುಸ್ತಕಗಳು ಅಡಕವಾಗಿವೆ.

ಪುಸ್ತಕ 1 - ಸ್ವಯಂ ಹೀಲಿಂಗ್ - ಸಂಪರ್ಕ ವಿಧಾನ

ಪುಸ್ತಕ 2 - ಬಾಂಧವ್ಯಗಳ ಹೀಲಿಂಗ್ - ನೀನೂ ಸುಂದರ ನಾನೂ ಸುಂದರ

ಸಸ್ತಕ 3 - ಪ್ರೀತಿಪಾತ್ರರ ಹೀಲಿಂಗ್ - ನಿಮ್ಮೊಂದಿಗೆ ನಾನಿರುವೆ

ಈ ವಿಶಿಷ್ಟ ಪುಸ್ತಕವು ಮಾನವನ ದೈಹಿಕ, ಭಾವೋದ್ವೇಗದ, ಮಾನಸಿಕ, ಆಧ್ಯಾತ್ಮಿಕ ಮತ್ತು ಇತರ ವಿಚಾರಗಳ ಪರಿಣಾಮಕಾರಿ ಹೀಲಿಂಗ್ ವಿಧಾನಗಳನ್ನು ತಿಳಿಸಿಕೊಡುತ್ತದೆ. ನಾವು ಜನ್ಮತಃ ಹೊಂದಿರುವ ಒಳ ಅರಿವು ಮತ್ತು ಇಂದ್ರಿಯ ಜ್ಞಾನಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿರುವ ಹೀಲಿಂಗ್ ವಿಧಾನಗಳು ಜಾಗೃತಗೊಳಿಸುತ್ತವೆ. ನೀವು ಹೊಸಬರೇ ಆಗಿದ್ದರೂ, ಹೀಲರ್ ಆಗಿ ಗುರುತಿಸಲ್ಪಟ್ಟಿದ್ದರೂ ಈ ಪುಸ್ತಕವು ಅಮೂಲ್ಯ ಮಾರ್ಗದರ್ಶಿಯಾಗಿ ನೆರವಿಗೆ ಬರುತ್ತದೆ.

ಪ್ರತಿಯೊಂದು ಭಾಗವು 21 ದಿನಗಳ ಹೀಲಿಂಗ್ ವಿಧಾನಗಳನ್ನು ತಿಳಿಸಿಕೊಡುತ್ತದೆ. ನಮ್ಮೊಳಗಿನ ಅಗಾಧ ಜ್ಞಾನವನ್ನು ಕಂಡುಕೊಳ್ಳಲು, ನಮ್ಮ ಸಂಬಂಧಗಳಲ್ಲಿ ಪಾವಿತ್ರ್ಯವನ್ನು ಕಂಡುಕೊಳ್ಳಲು, ನಮ್ಮ ಪ್ರೀತಿಪಾತ್ರರ ಜತೆಗಿನ ಸಂಪರ್ಕವನ್ನು ಕಂಡುಕೊಳ್ಳಲು ಈ ವಿಧಾನಗಳು ನೆರವಾಗುತ್ತವೆ. ನಮ್ಮ ಬದುಕಿನ ಸತ್ಯಗಳನ್ನೂ ಅವು ಮನಗಾಣಿಸುತ್ತವೆ. ಸರಳ ಸಾಧನಗಳು ಮತ್ತು ತಂತ್ರಗಳನ್ನು ಬಳಸಿ ಹೀಲಿಂಗ್ ಮಾಡುವುದು ಹೇಗೆ ಎಂಬ ಮಾರ್ಗದರ್ಶನ ಇಲ್ಲಿದೆ. ಮೊದಲು ನಾವು ಸ್ವತಃ ನಮ್ಮನ್ನೇ ಹೀಲ್ ಮಾಡಲು ಕಲಿಯುತ್ತೇವೆ. ನಂತರ ನಮ್ಮ ಬಾಂಧವ್ಯಗಳನ್ನು, ಕೊನೆಗೆ ನಮ್ಮ ಪ್ರೀತಿಪಾತ್ರರನ್ನು ಹೀಲ್ ಮಾಡುವಲ್ಲಿ ಶಕ್ತರಾಗುತ್ತೇವೆ.

ಹೀಲಿಂಗ್ ತಜ್ಞೆ ಸೋನಿಯಾ ಮೆಕ್ವಾನಿ ಅವರ ಈ ಪುಸ್ತಕವನ್ನು ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಸರಳವಾಗಿ ಅನುವಾದಿಸಿ ಕನ್ನಡಕ್ಕೆ ತಂದಿದ್ದಾರೆ. ಹೀಲಿಂಗ್ ಎಂಬುದು ನಮಗೆ ನಾವೇ ಮತ್ತು ನಮ್ಮ ಸುತ್ತಲಿನ ಮಂದಿಗೆ ನಾವು ಕೊಡಬಹುದಾದ ಒಂದು ಅತ್ಯುತ್ತಮ ಗಿಫ್ಟ್.

You may also like

Subscribe to our emails

Be the first to know about new collections and special offers.