Title : Geramaradi kategalu, Folk tales, Writer : Rahamath Tarikere, Publisher : Amulya Pustaka

ಗೇರೆಮರಡಿ ಕತೆಗಳು

Rs. 150.00
Skip to product information
Title : Geramaradi kategalu, Folk tales, Writer : Rahamath Tarikere, Publisher : Amulya Pustaka
ಗೇರೆಮರಡಿ ಕತೆಗಳು
Rahamath Tarikere
Publisher - ಅಮೂಲ್ಯ ಪುಸ್ತಕ
Type - Paperback
Pages - 113
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

ಗೇರಮರಡಿ, ತರೀಕೆರೆ ಸೀಮೆಯ ಒಂದು ಪುಟ್ಟ ಹಳ್ಳಿ. ಕಾಡುಗೇರಿನ ಮರಗಳು ತುಂಬಿದ ಮೊರಡಿಗಳ ತಪ್ಪಲಿನಲ್ಲಿ ಅದಿತ್ತು. ಕಾಡುಗೊಲ್ಲರೇ ವಾಸವಾಗಿರುವ ಈ ಹಳ್ಳಿಯ ಜನ, ಸಣ್ಣ ರೈತಾಪಿಗಳು; ಪಶುಗಾಹಿಗಳು: ನಮ್ಮೂರಿಗೆ ಬೆಳಬೆಳಿಗ್ಗೆಯೇ ಹಾಲು ಮಾರಲು ಬರುತ್ತಿದ್ದವರು; ದನ-ಆಡು-ಕುರಿ ಬಿಟ್ಟುಕೊಂಡು ಅಡವಿಗೂ ಹೊಲದ ಕೆಲಸಕ್ಕೂ ಹೋಗುತ್ತಿದ್ದ ದುಡಿಮೆಗಾರರು: ಪ್ರಣಯ ಸಾಹಸದ ಹಲವಾರು ರೋಚಕ ಕತೆಗಳಿಗೆ ಕಾರಣಕರ್ತೃ ಆಗಿದ್ದವರು; ಇಡೀ ಊರೇ ಕಥಿಸುವ ಹಾಡುವ ಕಲಾವಿದರಿಂದ ತುಂಬಿತ್ತು. ಅಕ್ಷರದ ಸಹವಾಸವಿದ್ದಿದ್ದರೆ, ಇವರೆಲ್ಲ ಕನ್ನಡದ ಪ್ರತಿಭಾವಂತ ಲೇಖಕರಾಗಿರುತ್ತಿದ್ದರು ಅನಿಸುತ್ತಿತ್ತು. ಇಂತಹ ಹಳ್ಳಿಯಲ್ಲಿ ನನ್ನ ತಾರುಣ್ಯದ ಹತ್ತು ವರ್ಷಗಳು ಕಳೆದವು. ಅವು ನನ್ನನ್ನು ಇನ್ನಿಲ್ಲದಂತೆ ಸೃಜನಶೀಲಗೊಳಿಸಿದವು. ನನ್ನ ಪಾಲಿಗೆ ಗೇರಮರಡಿ ಜನಪದ ಪ್ರತಿಭೆಯ ಸಂಕೇತ. ಪ್ರಸ್ತುತ ಸಂಕಲನದ ಕತೆಗಳನ್ನು ಬೇರೆಬೇರೆ ಜಾತಿ ಧರ್ಮ ಸ್ಥಳಗಳಿಗೆ ಸೇರಿದ ಕತೆಗಾರರು ನಿರೂಪಿಸಿದ್ದರೂ, ಇವನ್ನೆಲ್ಲ ನಾನು ಕೇಳಿದ್ದು ಮತ್ತು ಸಂಗ್ರಹಿಸಿದ್ದು ಗೇರಮರಡಿಯಲ್ಲಿ, ಈ ಕತೆಗಳಲ್ಲಿ ಈ ಊರಿನ ಪರಿಸರದ ವಿವರಗಳಿವೆ. ಎಂತಲೇ ಇವು 'ಗೇರಮರಡಿ ಕತೆಗಳು', ನಾಲ್ಕು ದಶಕಗಳ ಹಿಂದೆ ಸಂಗ್ರಹ ಮಾಡಿದ ಈ ಕತೆಗಳು ಈಗಲೂ ತಾಜಾತನದಿಂದ ನಳನಳಿಸುತ್ತಿವೆ. ಇವನ್ನು ನಿರೂಪಿಸಿದ ಕತೆಗಾರರೆಲ್ಲರೂ ನಿಧನರಾಗಿದ್ದಾರೆ. ಆದರೆ ಕತೆಗಳಲ್ಲಿ ಅವರ ಕಲಾಚೈತನ್ಯ ಮತ್ತು ಲೋಕದೃಷ್ಟಿಗಳು ಜೀವಂತವಾಗಿವೆ.

-ರಹಮತ್ ತರೀಕೆರೆ


You may also like

Subscribe to our emails

Be the first to know about new collections and special offers.