ಹಾಗಾಗಿ ನಾವು ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು? ನಮಗೆ ಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಅಮೃತ!
ನಮಗೆ ಹಿತವಲ್ಲದ ಆಹಾರವನ್ನು ಮಿತಿ ಮೀರಿ ಸೇವಿಸಿದರೆ, ಅದುವೇ ನಮಗೆ ವಿಷ! ನಾವು ಬದುಕಲು ಆಹಾರವನ್ನು ಸೇವಿಸಬೇಕೇ ಹೊರತು, ಆಹಾರವನ್ನು ಸೇವಿಸಲು ಬದುಕಬಾರದು.
ನಮ್ಮ ಸಮಗ್ರ ಆರೋಗ್ಯದ ಗುಟ್ಟು, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿದೆ. ಆಹಾರವು ರುಚಿಯಿದ್ದಾಗ ಹೆಚ್ಚು ತಿನ್ನು ಎನ್ನುತ್ತದೆ, ನಮ್ಮ ಮನಸ್ಸು. ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಳ್ಳಬೇಕು. ಪ್ರತಿ ದಿನ ನಾವು ತಿನ್ನುವ ಆಹಾರವನ್ನು, ಅಂದೇ ದೈಹಿಕ ಚಟುವಟಿಕೆಗಳ ಮೂಲಕ ಕರಗಿಸಬೇಕು.