J. Krishnamurti
ಈ ಸಂಗತಿ ಕುರಿತು ಆಲೋಚನೆ ಮಾಡಿ
ಈ ಸಂಗತಿ ಕುರಿತು ಆಲೋಚನೆ ಮಾಡಿ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 300
Type - Paperback
Couldn't load pickup availability
ಈ ಸಂಗತಿ ಕುರಿತು ಆಲೋಚನೆ ಮಾಡಿ
ಪ್ಯಾರಾಬೋಲಾ ನಿಯತಕಾಲಿಕವು 'ಶತಮಾನದ ನೂರು ಅತ್ಯುತ್ತಮ ದಾರ್ಶನಿಕರಲ್ಲಿ ಒಬ್ಬರು ಎಂದು ಆಯ್ಕೆ ಮಾಡಿದೆ. ಕಿರಿಯ ಮತ್ತು ಹಿರಿಯರಿಗಾಗಿ ಕೃಷ್ಣಮೂರ್ತಿಯವರ ಬೋಧನೆಯ ಅತ್ಯುತ್ತಮ ಪರಿಚಯ ಮತ್ತು ಕೃಷ್ಣಮೂರ್ತಿಯವರು ಭಾರತದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ನಡೆಸಿದ ಮಾತುಕತೆಗಳು ಮತ್ತು ಚರ್ಚೆಗಳನ್ನು ಒಳಗೊಂಡಿರುವ ಈ ಪುಸ್ತಕವು ವಿಶ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ. ಇಲ್ಲಿ ಕೃಷ್ಣಮೂರ್ತಿಯವರು, ಶಿಕ್ಷಣದ ಕಾರ್ಯವು ಮಾನವ ಜೀವನದ ಉದ್ದೇಶಕ್ಕಿಂತ ಭಿನ್ನವಾಗಿಲ್ಲ ಎಂದು ನಿಸ್ಸಂದಿಗ್ಧವಾಗಿ ಹೇಳುತ್ತಾರೆ:
'ಉತ್ತಮಿಕೆ, ಸತ್ಯ ಅಥವಾ ದೇವರ ಹುಡುಕಾಟದಲ್ಲಿ ಚೈತನ್ಯವನ್ನು ಬಿಡುಗಡೆ ಗೊಳಿಸುವುದೇ ಶಿಕ್ಷಣದ ಕಾರ್ಯ. ಇದರಿಂದ ವ್ಯಕ್ತಿ ನಿಜವಾದ ಮಾನವನಾಗುವನಲ್ಲದೆ ಸಮರ್ಪಕ ನಾಗರಿಕನಾಗುವನು... ನದಿ ದಡಗಳನ್ನು ಸೃಷ್ಟಿಸಿದರೆ ಆ ದಡಗಳು ನದಿಯನ್ನು ಹಿಡಿದಿಟ್ಟುಕೊಳ್ಳುತ್ತವೆ; ಅಂತೆಯೇ ಸತ್ಯವನ್ನರಸುವ ಚೈತನ್ಯವು ಯಾವುದೇ ಬಗೆಯ ಹೇರಿಕೆ ಇಲ್ಲದ ಶಿಸ್ತನ್ನು ಸೃಷ್ಟಿಸುತ್ತದೆ. ನದಿ ಕಡಲ ಒಡಲು ಸೇರುವಂತೆ ಚೈತನ್ಯವು ತನ್ನದಾದ ಬಿಡುಗಡೆಯನ್ನು ಕಂಡುಕೊಳ್ಳುತ್ತದೆ.'
ಜೆ. ಕೃಷ್ಣಮೂರ್ತಿ (1895-1986) ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ದಾರ್ಶನಿಕರು; ಆರು ದಶಕಗಳಿಗೂ ಮಿಕ್ಕಿ ವಿಶ್ವ ಪರ್ಯಟನ ಮಾಡಿ ಉಪನ್ಯಾಸಗಳನ್ನು ನೀಡಿದವರು; ಸಂವಾದಗಳನ್ನು ನಡೆಸಿದವರು; ಆದರೆ ಇದೆಲ್ಲ 'ಗುರು' ಎಂಬ ನೆಲೆಯಲ್ಲಿ ಅಲ್ಲ; ಗೆಳೆಯನೆಂಬ ನೆಲೆಯಲ್ಲಿ. ಅವರ ಬೋಧನೆಗಳು ಪುಸ್ತಕ ಜ್ಞಾನ ಮತ್ತು ಸಿದ್ಧಾಂತಗಳನ್ನು ಆಧರಿಸಿಲ್ಲ. ಆದುದರಿಂದಲೇ ಮಾನವನ ಇರವಿನ ಚಿರಂತನ ಸಮಸ್ಯೆ ಮತ್ತು ಸದ್ಯದ ಜಾಗತಿಕ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಬಯಸುವ ನಮ್ಮೆಲ್ಲರ ಎದೆಯ ಕದವನ್ನು ಕೃಷ್ಣಮೂರ್ತಿಯವರ ಮಾತುಗಳು ತಟ್ಟುತ್ತವೆ
Explore life's deeper questions with this thoughtful self-help guide by J. Krishnamurti. "Ee Sangathi Kuritu Alochane Madi" invites you to reflect on everyday matters with fresh perspective and mindfulness. Published by Vamshi Publications, this book encourages introspection and personal growth through contemplative thinking. Perfect for readers seeking to understand themselves better and navigate life's challenges with greater awareness and wisdom. A valuable companion for your journey toward self-discovery and meaningful living.
Share

Subscribe to our emails
Subscribe to our mailing list for insider news, product launches, and more.