Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
‘ನಮ್ಮನೆ ಬಂಗಾರʼ ಧಾರಾವಾಹಿ ಶುರುವಾದ ಮೊದಲ ವಾರದಲ್ಲಿ ಯಾವಾಗಲೋ ಒಮ್ಮೆ ಪೂರ್ತಿ ಒಂದು ಕಂತು ನೋಡಿದ್ದ ಮಲ್ಲಿಯು ನಾಯಕಿ ವಾಣಿಯ ಅಂದಕ್ಕೆ ಮರುಳಾಗಿದ್ದ. - ಕನಸಿನ ವಾಣಿ
ಮಂದಿ ಊರನ್ನು ಬಿಟ್ಟು ಮಶಾಣದ ದಾರಿ ಹಿಡಿಯಲು ಎಡಕ್ಕೆ ಹೊರಳಿದಾಗ ನಿಂಗವ್ವನ ಹೆಣ ಅಲುಗಾಡಿತು. - ದಿಟ
ರಾಜಶೇಖ್ರ ನನ್ ಫ್ರೆಂಡೇ, ಭಯಂಕರ ದೊಡ್ಡ ರೈಟ್ರು. ಆದ್ರೆ ಅವ್ನಿಗೆ ನನ್ ಕತೀನ ಹೇಳಾಕ ಬಿಟ್ರೆ ಬಡ್ಡೀಮಗ ಗ್ಯಾರಂಟಿ ಬರೀ ಪೇಜುಗುಳುನ್ನ ತುಂಬುಸ್ತಾನ. - ಜಗದೀಶನ ಕತೆ
ತಮ್ಮ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ ನಮ್ಮ ಜೋಡಿಯನ್ನು ಕಂಡ ಅಮ್ಮ, ಚಂದ್ರಕ್ಕ ಮತ್ತು ಯಮುನಕ್ಕ ನಮ್ಮನ್ನು ಮನಸಾರೆ ಹರಸಿ ಖುಶಿಯಾಗಿದ್ದರು, ಕನಸಲ್ಲಿ. - ಚಾಳಿ
ಯಾವುದಕ್ಕೂ ಅಂಟಿಕೊಳ್ಳದ ಭುವಿಯ ವರ್ತನೆ ವಿಶಾಲ್ನನ್ನು ನಿರಾಳವಾಗಿಸುತ್ತಿತ್ತು ಮತ್ತು ಪ್ರಿಯಾಂಕಳಿಗಿಂತ ಇವಳ ಬಗ್ಗೆಯೇ ಹೆಚ್ಚು ಯೋಚಿಸುವಂತೆ ಮಾಡುತ್ತಿತ್ತು. – ಅಸ್ತವ್ಯಸ್ತ ಪುಟಗಳು
‘ದೇವ್ರು ಫೋಟೋ ತರಾಕ ಇಶ್ಟೊತ್ತಾ?’ ಎಂದ ಹೆಂಡತಿ ಕುಸುಮಾಳಿಗೆ ‘ನಿಮ್ ದೇವ್ರು ಸಿಕ್ಕ, ನಮ್ ದೇವ್ರು ಜಲ್ದಿ ಸಿಗ್ಲಿಲ್ಲ’ ಎಂದ ನಾಗರಾಜ ನಗುತ್ತಾ. – ಹೊಸ ಉಸಿರುಗಳು
ಗಂಡು ಹೆಣ್ಣಿನ ಗೆಳೆತನಗಳಾಗುವುದೇ ಮುಂದೆ ಲವ್ ಆಗಲು ಎಂದುಕೊಳ್ಳುವುದು ದಡ್ಡತನ. ಅವ್ರವ್ರ ಲವ್ವು ಅವ್ರವ್ರ ಇಶ್ಟ. ನನ್ನ ಪಾಡಿಗೆ ನಾನು ಇರುವುದು ಒಳ್ಳೆಯದು. – ನಮ್ಮ ಮೆಟ್ರೋ
ನಿಮ್ಮ ಮಗನಿಗೆ ಗುರು ಬಲ ಬಂದಾಯ್ತು. ಸೂಪರ್ ಲಕ್ಕು, ಇಡೀ ಜನ್ಮಕ್ಕಾಗುವಶ್ಟು ಲಕ್ ಕಾದಿದೆ ಅವ್ನಿಗೆ. ರಾಹು, ಕೇತು, ಶನಿಗಳಿಗೆ ಇನ್ಮೇಲೆ ಕೆಲ್ಸ ಇಲ್ಲ ಅವ್ನ ಗ್ರಹಗತಿಯಲ್ಲಿ. – ಲಕ್
Be the first to know about new collections and special offers.