Skip to product information
1 of 2

Harivu Books

ದಾಸ ಶ್ರೇಷ್ಠ ಪುರಂದರದಾಸರು

ದಾಸ ಶ್ರೇಷ್ಠ ಪುರಂದರದಾಸರು

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00

ಕನ್ನಡ ಸಾಹಿತ್ಯ ಚರಿತ್ರೆಯನ್ನು ನಾವು ಸಮಗ್ರವಾಗಿ ಅವಲೋಕಿಸಿದಾಗ ವಿಶ್ವಸಾಹಿತ್ಯಕ್ಕೆ ಕನ್ನಡದ್ದೇ ಆದ ವಿಶಿಷ್ಟ ಕೊಡುಗೆ ಎಂದರೆ ದಾಸಸಾಹಿತ್ಯ ಮತ್ತು ವಚನಸಾಹಿತ್ಯ ಎನ್ನಬಹುದು. ಇವು ಕನ್ನಡ ಸಾಹಿತ್ಯ ಶಾರದೆಯ ಎರಡು ಕಣ್ಣುಗಳಿದ್ದಂತೆ. ಈ ಪೈಕಿ ದಾಸಸಾಹಿತ್ಯವು ಭಕ್ತಿಮಾರ್ಗದ ಪ್ರತಿಪಾದನೆಯ ಜತೆಗೆ ಕನ್ನಡದ ಭಾಷಿಕ ಶಕ್ತಿಯ ಬಹು ಆಯಾಮಗಳನ್ನು ತೆರೆದು ತೋರಿರುವುದಲ್ಲದೆ ಭಾರತೀಯ ಸಂಗೀತ ಶಾಸ್ತ್ರದಲ್ಲಿ ಅಮರವಾದ ಕರ್ನಾಟಕ ಸಂಗೀತದ ಸಿದ್ದಿ ಪ್ರಸಿದ್ದಿಗೆ ಸಾಕ್ಷಿಯಾಗಿದೆ. ಈ ದೃಷ್ಟಿಯಿಂದ ಸಾಹಿತ್ಯ ಮತ್ತು ಸಂಗೀತ ಸಾಮರಸ್ಯ ಹೊಂದಿರುವ ಹರಿದಾಸ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ಕನ್ನಡನಾಡು ನೀಡಿರುವ ವಿಶಿಷ್ಟ ಕೊಡುಗೆ ಎಂದರೆ ತಪ್ಪಾಗದು.

ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹರೆಂದು ಕರೆಯುವುತ್ತೇವೆ. ಇವರ ಕೀರ್ತನೆಗಳು ಶಾಸ್ತ್ರೀಯ ಸಂಗೀತದ ಸೂಕ್ಷ್ಮಗಳಿಗೆ ಅಳವಡುವಂತೆಯೇ ಸಾಮಾನ್ಯ ಹಾಡುಗಾರರ ಸೀಮಿತ ಪ್ರತಿಭೆಗೂ ಒಗ್ಗಿಕೊಳ್ಳುತ್ತವೆ. ಪ್ರಸ್ತುತ ಈ ಕೃತಿಯಲ್ಲಿ ಪುರಂದರದಾಸರ ಬದುಕು ಹಾಗೂ ಅವರ ಸಾಹಿತ್ಯದ ಕುರಿತಾಗಿ ನಮ್ಮ ಮುಂದಿನ ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯತೆ ಇರುವುದರಿಂದ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ನಿರೂಪಿಸಲಾಗಿದೆ

View full details