Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ನೀವು ಸಿನೆಮಾಗಳನ್ನು ನೋಡುತ್ತಿರಬೇಕು. ಹೀಗಾಗಿ 'ಚಾಪ್ಲಿನ್'ರ ಪರಿಚಯ ಇದೆಯೋ, ಇಲ್ಲವೋ ಎಂದು ನಿಮ್ಮನ್ನು ಕೇಳುವುದಕ್ಕೆ ಅರ್ಥವಿಲ್ಲ. 'ಚಾಪ್ಲಿನ್ಗಿರಿ'-ಶಬ್ದ ನಮ್ಮ ದೇಶದ ಅನೇಕ ಹಳ್ಳಿಗಳು ಮತ್ತು ಸಮಾಜದಲ್ಲಿ ಪ್ರಚಲಿತವಾಗಿದೆ. ಸಾಮಾನ್ಯವಾಗಿ ದುಃಖದಲ್ಲಿ ನಗುವ ನಗಿಸುವ ಅಥವಾ ಸಂತೋಷದಲ್ಲಿ ಅಳುವ-ಅಳಿಸುವ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯಕ್ಕೆ ಚಾಪ್ಲಿನ್ ಗಿರಿ ಎನ್ನಲಾಗುತ್ತದೆ. ಪ್ರಸ್ತುತ ಕಥಾ-ಚಕ್ರದಲ್ಲಿ 'ಚಾರ್ಲಿ ಚಾಪ್ಲಿನ್ರ ಗಾಂಧಿ' ಯನ್ನು ಓದಿ ನಿಮಗೆ ಬಹಶಃ 'ಚಾಪ್ಲಿನ್ ಗಿರಿ' ಶಬ್ದದಲ್ಲಿ ಅದೆಷ್ಟು ಮತ್ತು ಎಂಥೆಂಥ ಅರ್ಥಗಳ ಸಮಾವೇಶವಾಗಿದೆ ಎಂದು ತಿಳಿಯುವಲ್ಲಿ ಸಹಾಯಕವಾಗಬಹುದು.
'ಚಾರ್ಲಿ ಚಾಪ್ಲಿನ್ರ ಗಾಂಧಿ' ಯ ಕಥೆ, ಸಿನೆಮಾ ನೋಡುವ ಮತ್ತು ವಯಸ್ಸಿನಲ್ಲಿ ಚಿಕ್ಕವರಾಗಿರುವ ಓದುಗರಿಗೆ ಮಾತ್ರವಲ್ಲ, ಯುವಕರು ಮತ್ತು ವಯಸ್ಕರಿಗೂ ಅಲ್ಲ; ವಯಸ್ಸು ಮತ್ತು ಅನುಭವದಲ್ಲಿ ಕಿಶೋರರು, ಯುವಕರು ಅಥವಾ ವಯಸ್ಕರಾಗಿದ್ದೂ 'ಮಕ್ಕಳಾಗಿರುವ' ವ್ಯಕ್ತಿಗಳಿಗೆ ಹಾಗೂ ತಮ್ಮ ಕೊನೆ ಉಸಿರಿರುವವರೆಗೆ ತಮ್ಮೊಳಗಿನ ಮಗು ಮತ್ತು ಮುಗ್ಧತೆಯನ್ನು ಜೀವಂತವಾಗಿಟ್ಟಿಕೊಳ್ಳಲು ಬಯಸುವ ಎಲ್ಲರಿಗಾಗಿಯೂ ಈ ಪುಸ್ತಕವಿದೆ.
'ಚಾರ್ಲಿ ಚಾಪ್ಲಿನ್ರ ಗಾಂಧಿ' ಯಲ್ಲಿ ಒಂದು ಕಥೆ ಮಾತ್ರವಲ್ಲ, ಕಥೆಯೊಳಗೆ ಕಥೆಯಿದೆ, ಕಥೆಯ ಹಿಂದೆ ಕಥೆಯಿದೆ, ಕಥೆಯ ಮುಂದೆ ಕಥೆಯಿದೆ, ಕಥೆಯೊಳಗೆ ಕಥೆಯಿದೆ, ಕಥೆಯ ಹೊರಗೆ ಕಥೆಯಿದೆ.
'ಚಾರ್ಲಿ ಚಾಪ್ಲಿನ್ರ ಗಾಂಧಿ' ಭಾಷೆ ಮತ್ತು ವಿಷಯದ ದೃಷ್ಟಿಯಿಂದ ಜಟಿಲವಾಗಿದೆ ಎಂದು ಅನ್ನಿಸಬಹುದು; ಕಾರಣ, ಇದರಲ್ಲಿ ಫಿಲ್ಡ್-ನಿರ್ಮಾಣಕ್ಕೆ ಸಂಬಂಧಿಸಿದ ಭಾಷೆ ಮತ್ತು ತಾಂತ್ರಿಕ ಶಬ್ದಗಳನ್ನು ಬಳಸಲಾಗಿದೆ.
ಈಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹಿಂದಿ ಸಿನೆಮಾಗಳಿಂದ ಬಂದ ಶಬ್ದವೊಂದು ಹಳ್ಳಿ-ಸಮಾಜದಲ್ಲಿ ಧಾರಾಳವಾಗಿ ಚಾಲ್ತಿಯಲ್ಲಿದೆ- ಆ ಶಬ್ದವೇ 'ಗಾಂಧಿಗಿರಿ. ನಿಮ್ಮಲ್ಲಿ ಎಷ್ಟು ಜನ ಗಾಂಧಿಯವರನ್ನು ಅರಿತಿರಿ, ಅವರ ಬಗ್ಗೆ ಎಷ್ಟು ಕೇಳಿದರಿ ಅಥವಾ ಓದಿದಿರಿ ಎಂಬುದನ್ನು ತಿಳಿಯದೆಯೇ, ನೀವು 'ಗಾಂಧಿಗಿರಿ' ಶಬ್ದದಿಂದ ಪರಿಚಿತರು ಎಂದು ಹೇಳಬಹುದು. ಹೀಗಾಗಿ 'ಚಾರ್ಲಿ ಚಾಪ್ಲಿನ್ರ ಗಾಂಧಿ' ಯನ್ನು ಓದಿ ನೀವು, 'ಚಾಪ್ಲಿನ್ಗಿರಿ' ಮತ್ತು 'ಗಾಂಧಿಗಿರಿ' ಯಲ್ಲಿರುವ ವ್ಯತ್ಯಾಸ ಹಾಗೂ ಸಾಮ್ಯತೆ ಏನು ಎಂಬ ಪ್ರಶ್ನೆ ಬಗ್ಗೆ ಅಗತ್ಯವಾಗಿ ವಿಚಾರ ಮಾಡಿ.
-ಹೇಮಂತ್
Be the first to know about new collections and special offers.