B R Suhas
ಭೋಜರಾಜನ ಕಥೆಗಳು
ಭೋಜರಾಜನ ಕಥೆಗಳು
Publisher -
- Free Shipping Above ₹400
- Cash on Delivery (COD) Available*
Pages - 172
Type - Paperback
Couldn't load pickup availability
ಸಂಸ್ಕೃತ ಸಾಹಿತ್ಯವು ಕಥೆಗಳ ಅಕ್ಷಯ ಭಂಡಾರ. ಕಥಾಸರಿತ್ಸಾಗರ, ವೇತಾಲಪಂಚವಿಂಶತಿ, ಪಂಚತಂತ್ರ, ಹಿತೋಪದೇಶ, ಶುಕಸಪ್ತತಿ, ಪುರುಷಪರೀಕ್ಷಾ, ಮೊದಲಾದ ಅನೇಕ ಕಥಾಸಂಗ್ರಹಗಳು ಸಂಸ್ಕೃ ತದಲ್ಲಿವೆ. ಈ ಸಾಲಿಗೇ ಸೇರುವಂಥದ್ದು ಬಲ್ಲಾಳ ಪಂಡಿತನ ಭೋಜ ಪ್ರಬಂಧವೆಂಬ ಗ್ರಂಥ. ಈ ಗ್ರಂಥದ ಕನ್ನಡಾನುವಾದವೇ ಪ್ರಸ್ತುತ ಗ್ರಂಥವಾದ ಭೋಜರಾಜನ ಕಥೆಗಳು, ಮಾಳವದ ಸುಪ್ರಸಿದ್ಧ ರಾಜನಾಗಿದ್ದ ಭೋಜನು ಸ್ವಯಂ ಪಂಡಿತನೂ ಪಂಡಿತಪೋಷಕನೂ ಆಗಿದ್ದ. ಅವನು ಕವಿಗಳ ಪದ್ಯಗಳಿಗೆ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷ ಹಣ ಕೊಡುತ್ತಿದ್ದನೆಂದು ಪ್ರತೀತಿ! ಭೋಜರಾಜ ಹಾಗೂ ಕಾಳಿದಾಸ, ಮೊದಲಾದ ಅನೇಕ ಕವಿ, ಪಂಡಿತರ ನಡುವೆ ನಡೆಯುವ ಸರಸ, ಚಮತ್ಕಾರ ಪ್ರಸಂಗಗಳೇ ಈ ಗ್ರಂಥದ ವಸ್ತು. ಇಲ್ಲಿ ಬರುವ ಅನೇಕ ಕವಿಗಳು ಬೇರೆ ಬೇರೆ ಕಾಲಮಾನದವರಾಗಿದ್ದು ಭೋಜರಾಜನ ಸಮಕಾಲೀನರಲ್ಲ. ಆದರೆ ಬಲ್ಲಾಳ ಕವಿಯು ಅವರನ್ನೆಲ್ಲಾ ಒಂದೆಡೆ ತಂದು ಸರಸ, ಚಮತ್ಕಾರ ಪ್ರಸಂಗಗಳನ್ನು ಹೆಣೆದಿದ್ದಾನೆ. ಹಾಗಾಗಿ ಇದು ಐತಿಹಾಸಿಕವಾಗಿ ಅಷ್ಟು ಸತ್ಯವಾದ ಗ್ರಂಥವಲ್ಲದಿದ್ದರೂ ವಿನೋದಕ್ಕಾಗಿ ಓದಬೇಕಾದ ಸ್ವಾರಸ್ಯಕರ ಗ್ರಂಥ.
Share

Subscribe to our emails
Subscribe to our mailing list for insider news, product launches, and more.