Skip to product information
1 of 2

R. K. Asha Pramod

ಭಾವಚಿತ್ರ

ಭಾವಚಿತ್ರ

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹300

- Cash on Delivery (COD) Available

Pages - 120

Type - Paperback

ಈಗಾಗಲೇ ತಮ್ಮ ಕವನ ಸಂಕಲನ 'ಪ್ರಥಮ ಪಯಣ' ಮತ್ತು ಕಾದಂಬರಿ 'ಸುಮಬಾಲೆ'ಯ ಮೂಲಕ ಕನ್ನಡದ ಓದುಗರಿಗೆ ಪರಿಚಯಗೊಂಡಿರುವ ಲೇಖಕಿ ಆರ್.ಕೆ. ಆಶಾ ಪ್ರಮೋದ್.

ವೃತ್ತಿಯಲ್ಲಿ ಸರ್ಕಾರಿ ಅಧಿಕಾರಿಯಾಗಿರುವ ಇವರು ಪ್ರವೃತ್ತಿಯಲ್ಲಿ ಭಾವನಾ ಜೀವಿ. ಪೂರಕವಾಗಿ ಕವನ ಕಥನಗಳು ಇವರ ಗೆಳತಿಯರು. ತಮ್ಮ ಭಾವನಾ ಪ್ರಪಂಚದಲ್ಲಿ ಇವರಿಗೆ ದಕ್ಕುವ ವೈವಿಧ್ಯಮಯ ಅನುಭವಗಳನ್ನು ಯಥಾವತ್ತಾಗಿ ಅಕ್ಷರರೂಪಕ್ಕೆ ಇಳಿಸುವ ಇವರ ಕೃಷಿ ಈಗ ಆರಂಭವನ್ನು ಕಂಡಿದೆಯಾದರೂ ತೆನೆಕಾಳು ಗಟ್ಟಿತನವನ್ನೂ, ಸೊಗಡನ್ನೂ ಹೊಂದಿವೆ ಎನ್ನಬಹುದು.

ಇಲ್ಲಿನ ಕವನಗಳಲ್ಲಿ ಅವರ ಭಾವನಾ ಲಹರಿ ದ್ವಿತೀಯ ಪಯಣವನ್ನು ಕಂಡಿದೆ ಎನ್ನಬಹುದು. ಅದು ಅದ್ವಿತೀಯವಾಗಲಿ ಎಂಬುದು ನಮ್ಮ ಶುಭ ಹಾರೈಕೆ.

ತಮ್ಮ ಚೊಚ್ಚಲು ಕವನ ಸಂಕಲನದ ನಂತರ 'ಭಾವಚಿತ್ರ' ಎಂಬ ಈ ಕವನಗಳ ಗುಚ್ಛವನ್ನು ಪ್ರಕಟಪಡಿಸಲು ಅನುಮತಿ ನೀಡಿರುವುದಕ್ಕೆ ನಾವು ಅವರಿಗೆ ಆಭಾರಿ.

ಸಹೃದಯರಾದ ನಿಮಗೆ ಈ ಕವನಗಳಲ್ಲಿನ ಭಾವತೀವ್ರತೆ, ಭಾವಪ್ರಭಾವ, ಭಾವಲೋಲುಪತೆ, ಭಾವಸಾಂದ್ರತೆ... ಇತ್ಯಾದಿಗಳು ಅನುಭವಕ್ಕೆ ಬರದೇ ಇರುವುದಿಲ್ಲ. ತಮ್ಮ ಭಾವಸ್ಪಂದನ ಸೇರಿದಲ್ಲಿ ನಾವು ಋಣಿ.

-ಪ್ರಕಾಶಕರು

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)