Skip to product information
1 of 2

Dr.B.R.Suhas

ಭಾರತೀಯ ಜಾನಪದ ಕಥಾಲೋಕ

ಭಾರತೀಯ ಜಾನಪದ ಕಥಾಲೋಕ

Publisher -

Regular price Rs. 375.00
Regular price Rs. 375.00 Sale price Rs. 375.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 352

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಭಾರತವು ಹಲವಾರು ವಿಷಯಗಳಲ್ಲಿ ಶ್ರೀಮಂತವಾಗಿರುವಂತೆ, ಕಥೆಗಳ ವಿಷಯದಲ್ಲೂ ಬಹಳ ಶ್ರೀಮಂತವಾಗಿದೆ. ಭಾರತವು ಕಥೆಗಳ ತವರೂರು ಎಂದು ಹೇಳುತ್ತಾರೆ. ಇದನ್ನು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಾತ್ಯ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಬಹಳ ಹಿಂದಿನಿಂದಲೇ ಭಾರತೀಯರು ನೀತಿಯನ್ನು ಬೋಧಿಸಲು ಒಂದು ಘಟನಾತ್ಮಕವಾದ ಕಥೆಯ ಮೂಲಕ ಹೇಳುವುದು ಅತ್ಯಂತ ಪರಿಣಾಮಕಾರಿಯಾದ ಮಾರ್ಗವೆಂದು ಕಂಡುಕೊಂಡರು. ಋಷಿಮುನಿಗಳು ಇದನ್ನು ಯಶಸ್ವಿಯಾಗಿ ಬಳಸಿಕೊಂಡರು. ಹಾಗಾಗಿಯೇ, ವಿಶ್ವದಲ್ಲೇ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲೇ ಕಥೆಗಳ ಎಳೆಗಳು ಸಿಗುತ್ತವೆ. ಅನಂತರ, ಉಪನಿಷತ್ತುಗಳಲ್ಲಿ ಕಥೆಗಳು ಬೆಳೆದಿರುವುದನ್ನು ಕಾಣಬಹುದು. ಆನಂತರದ ರಾಮಾಯಣ, ಮಹಾಭಾರತ, ಮತ್ತು ಅಷ್ಟಾದಶ ಪುರಾಣಗಳು ಮತ್ತು ಉಪ ಪುರಾಣಗಳಲ್ಲಿ ರಾಶಿ ರಾಶಿ ಕಥೆಗಳಿದ್ದು ಇವೆಲ್ಲವೂ ಕಥೆಗಳ ಗಣಿಗಳೇ ಆಗಿವೆ! ಇವು ಮುಖ್ಯವಾಗಿ ಧರ್ಮ ಮೋಕ್ಷಗಳ ಕುರಿತಾದ ಕಥೆಗಳಾದರೆ, ಕಥಾಸರಿತ್ಸಾಗರ, ಪಂಚತಂತ್ರ, ವೇತಾಲ ಪಂಚವಿಂಶತಿ, ಸಿಂಹಾಸನದ್ವಾತ್ರಿಂಶಿಕಾ, ಶುಕಸಪ್ತತಿ, ಪುರುಷ ಪರೀಕ್ಷಾ, ಮೊದಲಾದವುಗಳು, ಅರ್ಥ, ಕಾಮಗಳಿಗೆ ಸಂಬಂಧಿಸಿದ. ಮುಖ್ಯವಾಗಿ ಮನೋರಂಜನೆಯ ಉದ್ದೇಶವನ್ನು ಹೊಂದಿರುವ ಲೌಕಿಕ ಕಥಾಸಂಕಲನಗಳಾಗಿವೆ. ಈ ಲೌಕಿಕ ಕಥಾಪರಂಪರೆಯನ್ನೇ ಈಗ ಜಾನಪದ ಕಥೆಗಳೆಂದು ಗುರುತಿಸುತ್ತಾರೆ. ಹೀಗೆ ಬೆಳೆದು ಬಂದ ಈ ಲೌಕಿಕ ಅಥವಾ ಲೋಕಕಥೆಗಳನ್ನು ಅಥವಾ ಜಾನಪದ ಕಥೆಗಳನ್ನು ಮುಂದೆ, ಪ್ರತಿ ರಾಜ್ಯ, ಭಾಷೆ ಹಾಗೂ ಉಪಭಾಷೆಗಳಲ್ಲಿ ಹಳ್ಳಿಗಳಲ್ಲಿ ಗ್ರಾಮಸ್ಥರಿಂದ ಕೇಳಿ ಸಂಗ್ರಹಿಸಲಾಯಿತು

View full details