Veena Bannanje
ಅವರು, ಇವರು, ಎವರು...
ಅವರು, ಇವರು, ಎವರು...
Publisher - ಸಾಹಿತ್ಯ ಭಂಡಾರ
- Free Shipping Above ₹350
- Cash on Delivery (COD) Available*
Pages - 144
Type - Paperback
Couldn't load pickup availability
ನಮ್ಮ ಒಳಗೆ ಒಂದು ಮಾತ್ರ ಇಲ್ಲ. ಅದನ್ನು ಅಧ್ಯಾತ್ಮ ಎರಡು ಹಕ್ಕಿ ಎಂದಿತು. ಒಂದು ತಿನ್ನುವ ಹಕ್ಕಿ. ಇನ್ನೊಂದು ನೋಡುವ ಹಕ್ಕಿ. ಈ ಪರಿಭಾಷೆ ನಮಗೆ ಪಕ್ಕಾ ತಿಳಿಯದು. ಇದನ್ನು ಹೀಗೆ ಸರಳಗೊಳಿಸಬಹುದು. ನಮ್ಮ ಒಳಗೆ ಒಂದು ರಾ ಮೆಟೀರಿಯಲ್ ಇದೆ. ಹಾಗೆಯೇ ಒಂದು ಸುಪರ್ ಫೈನ್ ಎಲಿಮೆಂಟ್ ಕೂಡ ಉಂಟು.
ನಮ್ಮನ್ನು ನಾವು ಶೋಧಿಸದೇ ಇದ್ದರೆ ನಾವು ಕೇವಲ ರಾ ಮೆಟೀರಿಯಲ್, ಸಾಯುವ ವರೆಗೂ ಕಚ್ಚಾ ಪದಾರ್ಥ.
ಅದೇ ಒರಟು, ಬಿರುಸು, ಸುಳ್ಳು, ಕೆಟ್ಟ ನಡತೆ ಹೀಗೆ... ನಾನು ಇರುವುದೇ ಹೀಗೆ ಎಂಬ ಗುಮ್ಮ. ಒಂದು ವೇಳೆ ಈ ಗುಣಗಳನ್ನು ಒಪ್ಪದೇ ಹುಡುಕಿದರೆ.... ನಾನು ಮೃದು ಆಗಬಹುದು. ಬಿರುಸನ್ನು ಮಧುರ ಮಾಡಲಿಕ್ಕೆ ಸಾಧ್ಯ. ಸುಳ್ಳಿಗೆ ವಿದಾಯ ಹೇಳಬಹುದು. ಒಳಿತಿಗೆ ಪರಿವರ್ತಿಸಬಹುದು.
ಇದೆಲ್ಲ ಇರುವ ಕಚ್ಚಾ ಪದಾರ್ಥವನ್ನು ಸೂಪರ್ ಫೈನ್ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಒಂದು ತಪಸ್ಸಿದೆ. ಅದು ಜ್ಞಾನಿಯ ಕುರಿತು ಕೃಷ್ಣ ಗೀತೆಯಲ್ಲಿ ಹೇಳಿದ ಲಕ್ಷಣಗಳ ಆವಾಹನೆ. ಅದನ್ನು ಮಾಡುವಾಗ ನಾವು ಇರುವುದು ಇಲ್ಲವಾಗುತ್ತದೆ. ಕಾಣಿಸಿದ್ದು ಮರೆಯಾಗುತ್ತದೆ.
ಇದು ಸಾಮಾನ್ಯ ತಪಸ್ಸಲ್ಲ. ಇದನ್ನು ಮಾಡುವವರು ಕಡಿಮೆ. ಆದರೆ ಇದು ಎಲ್ಲರಿಗೂ ಸಾಧ್ಯ. ಯಾಕೆಂದರೆ ಈ ಸೂಪರ್ ಫೈನ್ ಎಲಿಮೆಂಟ್ ಎಲ್ಲರ ಒಳಗೂ ಇದೆ. ಮೀಟಿಂಗ್ ಪಾಯಿಂಟ್ ನಮ್ಮ ಕೈಯಲ್ಲಿ ಇದೆ. ನಮ್ಮ ಪರಿಶ್ರಮವೇ ತಪಸ್ಸು.
-ಒಳಪುಟದ ಲೇಖನದಿಂದ
Share

Subscribe to our emails
Subscribe to our mailing list for insider news, product launches, and more.