Kefha
ಅಟೆನ್ ಬರೋಲಿ ಗಾಂಧಿ
ಅಟೆನ್ ಬರೋಲಿ ಗಾಂಧಿ
Publisher -
- Free Shipping Above ₹400
- Cash on Delivery (COD) Available*
Pages - 118
Type - Paperback
Couldn't load pickup availability
'ಕೇಫ' ಎಂದು ನಾಮಾಂಕಿತಗೊಂಡ ಡಾ|| ಎ.ವಿ. ಕೇಶವಮೂರ್ತಿ ತಮ್ಮ ಸಮಕಾಲೀನರಲ್ಲಿ ಯಾರೊಬ್ಬರಂತೆಯೂ ಬರೆಯದೆ, ತಮಗೇ ವಿಶಿಷ್ಟವಾದ, ಕನ್ನಡದ ಮಟ್ಟಿಗಂತೂ ತೀರಾ ಸ್ಟೋಪಜ್ಞವಾದ, ಹಾಸ್ಯಶೈಲಿಯನ್ನು ರೂಢಿಸಿಕೊಂಡವರು. ಅವರ ಸೃಷ್ಟಿಯ 'ಮೈಗಳ್ಳರ ಸಂಘ' ಮತ್ತು 'ವಿರಾಟ ಭವನ' ಕನ್ನಡದಲ್ಲಿ ಸಂಭವಿಸಿರುವ ಅತ್ಯುತ್ತಮ 'ಕಾಮಿಕ್' ಸೃಷ್ಟಿಗಳು, ಇವುಗಳ ಹಿನ್ನೆಲೆಯಲ್ಲಿ ಚೌಲ, ಅಕಿಲಾಂಡಯ್ಯ, ಪಾಂಡು, ಜಿಪ್ಪಿ, ಶಿಂಗೈಯಂಗಾರಿ, ರೇಖಾ ತ್ಯಂ, ಉಜ್ಜನಪ್ಪ, ಡೋಂಚ್ ಫಿಕರ್ ಖಾದರ್, ಭಾನ್ಸಿಂಗ್, ಹೀಗೆ ಅವರು ಚಿತ್ರಿಸಿರುವ ಅನೇಕಾನೇಕ ಪಾತ್ರಗಳು ನಮ್ಮ ಸಮಾಜದ ವಿಶಿಷ್ಟ ವ್ಯಕ್ತಿತ್ವಗಳ ಪ್ರತಿನಿಧಿಗಳಾಗಿದ್ದಾರೆ. 'ಐರಾಟ ಭವನ'ದಲ್ಲಿ ಮದ್ದೂರೊಡೆ, ಬಾಲೆಕಾಯಿ ಬಜೆ, ಖಾರಾಬೂಂದಿ, ಓಂಪುಡಿ ಮೊದಲಾದ ಅಡ್ಡ ಹೆಸರುಗಳಿರುವ ಸುಹಾಸ ಗ್ರಹಗಳಿದ್ದಾರೆ. ಈ ಗ್ರಹಗಳ ನಡುವೆ ವಿರಾಜಮಾನರಾಗಿರುವ ಮಲ್ಕಾಲರಾಯರು ಎಂಥ ಯಃಕಶ್ಚಿತ್ ವಿಷಯವನ್ನೂ ತೀರ ಗಂಭೀರವಾಗಿ ಚರ್ಚಿಸುವ ಮೇಧಾವಿ', 'ಕೇಫ'ದ ಹಾಸ್ಯಪ್ರಜ್ಞೆಯ ಹಿಂದಿರುವ ಮನೋಧರ್ಮದಲ್ಲಿ ಜಾತಿ, ಧರ್ಮಗಳನ್ನು ಮೀರಿದ ಉದಾರ ಮನಸ್ಸು, ಮಾನವೀಯತೆಯನ್ನು ಮರೆಯದ, ಕೆಡುಕಿನ ಲವಲೇಶವಿಲ್ಲದ ಬದುಕು, ಇವೆಲ್ಲ ನಿಚ್ಚಳವಾಗಿವೆ. ಅವರ ಬರಹಗಳಲ್ಲಿ ಕೌಟುಂಬಿಕ ಕ್ಷೇಶ, ಸಾಮಾಜಿಕ ಅಸಮಾನತೆ, ರಾಜಕೀಯ ದೊಂಬರಾಟ ಮೊದಲಾದುವು ವ್ಯಂಗ್ಯಲೇಪವುಳ್ಳ ತಿಳಿಹಾಸ್ಯವಾಗಿ ಓದುಗರನ್ನು ರಂಜಿಸುತ್ತವೆ.
ಎಸ್. ದಿವಾಕರ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.