K. Nallathambi
ಅತ್ತರ್
ಅತ್ತರ್
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹350
- Cash on Delivery (COD) Available*
Pages - 95
Type - Paperback
Couldn't load pickup availability
ಕೆ.ನಲ್ಲತಂಬಿ ಅವರು ಇಷ್ಟವಾಗುವುದೇ ಅವರ ಪ್ರತಿ ಕತೆಗಳಲ್ಲಿನ ಪರಿಪುಷ್ಟ ರೊಮ್ಯಾಂಟಿಕ್ ಅನುಭವಗಳಿಂದ. ಅವರು ಸೃಜಿಸುವ ಪಾತ್ರಗಳು ಕಲ್ಪನೆಯೂ, ಸಹಜವೂ ಎಂಬಂತ ಅನುಭವ ಮೂಡಿಸಿ ವಾಸ್ತವದಲ್ಲಿದ್ದುಕೊಂಡೇ ಪ್ರಾಮಾಣಿಕವಾಗಿ ಓದುಗರೊಂದಿಗೆ ತಮ್ಮನ್ನು ತೆರೆದುಕೊಳ್ಳುತ್ತವೆ. ಅಷ್ಟೇ ನಿಷ್ಕಲ್ಮಷವಾಗಿ ತಮ್ಮ ಭಾವನೆಗಳನ್ನು ನಿವೇದಿಸಿಕೊಳ್ಳುತ್ತವೆ. ಆದರಿಂದ ಓದುಗರ ಮನಸ್ಸು ಬದುಕಿನ ಮಧುರ ನೆನಪುಗಳ ಏಕತಾನತೆಯ ಕಡೆಗೆ ಜಾರುತ್ತದೆ. ಅವರ ಕತೆಗಳಲ್ಲಿನ ಪಾತ್ರಗಳ ರಂಜನೆ ಅತಿಶಯೋಕ್ತಿ ಎನಿಸುವುದಿಲ್ಲ. ಕಥಾನಿರೂಪಣೆ ಪಾದರಸದಷ್ಟೇ ಚುರುಕು. ಆಯಾ ಕತೆಗಳ ಹಿನ್ನಲೆ, ಕತೆ ಘಟಿಸುವ ಸ್ಥಳಗಳನ್ನು ಅಷ್ಟೇ ಸುಂದರವಾಗಿ ಅವರ ನಿರೂಪಣೆಯಲ್ಲಿ ಚಿತ್ರಿಸುತ್ತಾರೆ. ಕೆಲವೊಮ್ಮೆ ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತುತ ಲೋಕರೂಡಿ ವ್ಯಾಪಾರ ಸಂಬಂಧಗಳಲ್ಲಿನ ಅನೇಕ ಸೂಕ್ಷ್ಮ ವಿಚಾರಗಳು ಈ ಸಂಕಲನದ ಕಥಾವಸ್ತುಗಳಾಗಿವೆ. ಅದನ್ನು ಸಮಕಾಲೀನತೆಯ ಏಕಾವಳಿ ಎಂದು ಬಣ್ಣಿಸಬಹುದು.
-ಶ್ರೀಧರ ಬನವಾಸಿ
Share

Subscribe to our emails
Subscribe to our mailing list for insider news, product launches, and more.