ಒಂದು ನೆಲೆಯಲ್ಲಿ ಮನೋವೈಜ್ಞಾನಿಕ ಕಾದಂಬರಿಯಂತೆಯೋ ಮತ್ತೊಂದು ನೆಲೆಯಲ್ಲಿ ಸಾಮಾಜಿಕ ಕಥನದಂತೆಯೂ ಇನ್ನೊಂದು ದಿಕ್ಕಿನಿಂದ ನೋಡಿದಾಗ ಈ ಕಾಲದ ಹೆಣ್ಣೂಬ್ಬಳ ಅಂತರಂಗದ ತಳಮಳದ ಚಿತ್ರಣದಂತೆಯೂ ಕಾಣಿಸುವ ಈ ಕಾದಂಬರಿಯನ್ನು ನಾನು ಒಂದೇ ಉಸಿರಿಗೆ ಇದರ ಗಾತ್ರ, ಕಥನ ಮತ್ತು ಧಾಟಿ ಕಿರುಕಾದಂಬರಿಯನ್ನೋ ನೀಳ್ಗತೆಯನ್ನೋ ಹೋಲುವಂಥದ್ದು. ಪೂರ್ಣಚಂದ್ರ ತೇಜಸ್ವಿಯವರ ಸ್ವರೂಪ ಕಾದಂಬರಿಯ ಸ್ವರೂಪಕ್ಕೆ ಇದು ಹತ್ತಿರವಾಗಿದೆ ಅಂತಲೂ ಹೇಳಬಹುದು.