G T Narayana Rao
ಆಲ್ಬರ್ಟ್ ಐನ್ ಸ್ಟೈನ್ ಮಾನವೀಯ ಮುಖ
ಆಲ್ಬರ್ಟ್ ಐನ್ ಸ್ಟೈನ್ ಮಾನವೀಯ ಮುಖ
Publisher - ನವಕರ್ನಾಟಕ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 176
Type - Paperback
Couldn't load pickup availability
ಆಲ್ಬರ್ಟ್ ಐನ್ಸ್ಟೈನ್ - ಇವರು ಹೆಚ್ಚಿನ ಪರಿಚಯ ಮಾಡಿಕೊಡಬೇಕಾದ ಅಗತ್ಯವಿರುವ ವಿಜ್ಞಾನಿಯೇನಲ್ಲ. ಜಗತ್ನಸಿದ್ದರು. ಆದರೂ ವಿಶ್ವಮಟ್ಟದ ಶ್ರೇಷ್ಠ ವಿಜ್ಞಾನಿಯೆಂದು ಗಣಿಸಲ್ಪಟ್ಟ ಇವರ ಬಗೆಗೆ ಬರೆದಷ್ಟೂ ಕಡಿಮೆಯೇ ಅಲ್ಲವೇ! ಈ ಕೃತಿ ಸಾಕಷ್ಟು ಸುದೀರ್ಘವಾಗಿ ಐನ್ಸ್ಟೈನ್ ಕ್ರಮಿಸಿದ ಹೆಜ್ಜೆಗಳನ್ನು ನಮಗೆ ಒದಗಿಸುತ್ತದೆ. ಒಬ್ಬ ವಿಜ್ಞಾನಿ ಆವಿಷ್ಕರಿಸಿದ ವೈಜ್ಞಾನಿಕ ವಸ್ತು ವೊಂದನ್ನು ಮಾನವಹಿತಕ್ಕಾಗಿ ಬಳಸದೆ ಸ್ವಾರ್ಥಕ್ಕಾಗಿ, ಯುದ್ಧಕ್ಕಾಗಿ ಅಣಿಗೊಳಿಸುವ ಹೇಯಕೃತ್ಯಗಳಿಗೆ ದುಷ್ಟ ಸರಕಾರಗಳೇ ಹೊಣೆಯಲ್ಲದೆ ವಿಜ್ಞಾನಿ ಎಂದಿಗೂ ಅದರ ಬೆಂಬಲಿಗನಾಗಿರಲಾರನು. ಆದರೂ ರಾಷ್ಟ್ರಗಳ ದುಡುಕುತನದಿಂದ ಪರಮಾಣು ಬಾಂಬ್ ಸ್ಫೋಟಗೊಂಡಿತು. ಹೀಗೆ ಅಸಂಖ್ಯ ವಿಷಯ ವಸ್ತುಗಳು ಈ ಕೃತಿಯುದ್ದಕ್ಕೂ ಓದಿಗೆ ಲಭ್ಯ. ಹಲವು ಪತ್ರಗಳನ್ನಾಧರಿಸದ ಆಂಗ್ಲ ಮೂಲ.
ಕೃತಿಯ ಕನ್ನಡಾನುವಾದ ಶ್ರೀ ಜಿ. ಟಿ. ನಾರಾಯಣ ರಾವ್ (1926-2008) ಅಂದಿನ ಮದರಾಸು ವಿಶ್ವವಿದ್ಯಾಲಯದ ಎಂ. ಎ. (ಗಣಿತ) ಪದವೀಧರರು (1947). ಗಣಿತದ ಉಪನ್ಯಾಸಕರಾಗಿದ್ದುದಲ್ಲದೆ ಅತ್ಯಂತ ಜನಪ್ರಿಯ ವಿಜ್ಞಾನ ಬರಹಗಾರರಾಗಿಯೂ ಅವರು ಪ್ರಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಪ್ರಕಟಣೆಯಾದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಆಕಾಶ ವಿಜ್ಞಾನದ ಲೆಕ್ಕಾಚಾರಗಳ ಇವರ ತಿಳುವಳಿಕೆ ಇವರು ಬರೆದ ಪುಸ್ತಕಗಳ ಮೂಲಕ ಇಂದು ಜೀವಂತವಾಗಿದ್ದು ನಮಗೆ ಲಭ್ಯವಿದೆ. ಇವರು ಪ್ರಧಾನ ಸಂಪಾದಕರಾಗಿದ್ದ 'ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ' ಮಾತ್ರವಲ್ಲದೇ ಇವರ ಹಲವಾರು ಅಮೂಲ್ಯ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.
Share

Subscribe to our emails
Subscribe to our mailing list for insider news, product launches, and more.