Kalpana Rentala, To Kannada : Ranganatha Ramachandrarao
ಐದನೇ ಗೋಡೆ
ಐದನೇ ಗೋಡೆ
Publisher - ಪಂಚಮಿ ಪಬ್ಲಿಕೇಷನ್ಸ್
- Free Shipping Above ₹300
- Cash on Delivery (COD) Available
Pages - 176
Type - Paperback
Couldn't load pickup availability
ಭಾರತದ ಹೊಸ ಆರ್ಥಿಕ ಸಾಧ್ಯತೆಗಳಿಗೆ ತೆರೆದುಕೊಂಡಂತೆ ಮಧ್ಯಮವರ್ಗದ ಹೆಣ್ಣುಮಕ್ಕಳ ಬದುಕಿನ ಎಲ್ಲೆಗಳೂ ವಿಸ್ತರಿಸಿದವು. ಉದ್ಯೋಗಾವಕಾಶ, ವಿವಾಹ, ವಿದೇಶೀ ಸಂಬಂಧ ಮೊದಲಾದ ಕರಣಗಳಿಗೆ ಆಕೆ ವಿದೇಶಕ್ಕೂ ಕಾಲಿಟ್ಟಳು ಹಲವು ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುವ ಅನಿವಾರ್ಯ ಈ ಹಿನ್ನೆಲೆಯಲ್ಲಿ 'ಐದನೇ ಗೋಡೆ" ಅನ್ಯವೂ ಹೊಸದೂ ಆದ ಸಂಸ್ಕೃತಿಯನ್ನು ಅಪ್ಪಿಕೊಳ್ಳಲೇ ಬೇಕಾದಾಗಿನ ಸಂಘರ್ಷವನ್ನು ಕೌಟುಂಬಿಕ, ಸಾಮಾಜಿಕ ನೆಲೆಗಳಲ್ಲಿ ಜನಾವರಣಗೊಳಿಸುತ್ತ ಹೋಗುತ್ತದೆ. ಕತೆಗಳಲ್ಲಿ ಹೊಸ ಆಲೋಚನೆ, ನಿರೂಪಣೆಯ ಆಪ್ತ ಬರಹಗಳಿವೆ.
'ಐದನೇ ಗೋಡೆ' ಕತೆಯು ಲೇಖಕಿಯಲ್ಲಿ ಇನ್ನೂ ಉಳಿದಿರುವ ಸಾಮಾಜಿಕ ಒಪ್ಪಿಗೆಯ ನಿರ್ಬಂಧ, ಇಕ್ಕಟ್ಟುಗಳನ್ನು ಕಾಣಿಸುವ ಆಪ್ತ ಬರಹ 'ಹೋಮ್ ರನ್' ಕತೆಯಲ್ಲಿ ಅಮೇರಿಕೆಯ ವಾಸ್ತವ್ಯವಲ್ಲೂ ಮಕ್ಕಳಿಗೆ ತಾಯಿ ಭಾಷೆ ಕಲಿಸುವ ತುಡಿತವಿದೆ ಆಟವೊಂದರ ವಿವರಣೆಯನ್ನೇ ರೂಪಕವಾಗಿಸುವ ಜಾಣ್ಮೆಯಿದೆ. "ಸ್ಲೀಪಿಂಗ್ ಫೀಲ್' ಗಂಡ ಹೆಂಡಿರ ಸಂಬಂಧ, ಕಾಮ, ಪುರುಷಾಹಂಕಾರ ಕುರಿತು ಮಾತಾಡುತ್ತದೆ. ಈಸ್ಟೋಜನ್ ಪಿಲ್, ಟೂ ಡಾಲರ್ಸ್ ಪ್ಲೀಸ್, ಟಂಕು ಇನ್ ಟೆಕ್ಸಾಸ್ ಮೊದಲಾದ ಕತೆಗಳು ಎರಡು ಸಂಸ್ಕೃತಿಗಳ ಸಂಘರ್ಷದ ಜೊತೆಯ ಬದುಕಿಗೆ ಹೊಂದಿಕೊಳ್ಳಲೇ ಬೇಕಾದ ಅನಿವಾರ್ಯಗಳನ್ನು ಅನಾವರಣಗೊಳಿಸುತ್ತವೆ. ಹೊಸ ನಿರೂಪಣೆಯಲ್ಲಿ `ಐದನೇ ಗೋಡೆ' ಸಂಕಲನ ಓದುಗರನ್ನು ಯೋಚನೆಗೆ ಹಚ್ಚುವಂಥ ಕೃತಿ. ಉತ್ತಮವಾದ ಅನುವಾದ ಕೃತಿಯ ಮೆರುಗನ್ನು ಹೆಚ್ಚಿಸಿದೆ.
-ವಿಜಯಾ
Share


Subscribe to our emails
Subscribe to our mailing list for insider news, product launches, and more.