Translated by R. P. Hegde
ಅಹಿರನ ದಂಡೆಯ ಮೇಲೆ
ಅಹಿರನ ದಂಡೆಯ ಮೇಲೆ
Publisher - ರವೀಂದ್ರ ಪುಸ್ತಕಾಲಯ
Regular price
Rs. 75.00
Regular price
Rs. 75.00
Sale price
Rs. 75.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಪ್ರತಿಷ್ಠಿತ ಆಸ್ಸಾಮಿ ಲೇಖಕಿ ಡಾ ಇಂದಿರಾ ಗೋಸ್ವಾಮಿ ಅವರ ಲಘು ಕಾದಂಬರಿಯ ಕನ್ನಡ ಅನುವಾದ ಇದು. ಛತ್ತೀಸಗಢದಲ್ಲ ಹರಿಯುವ ಅಹಿರನ ನದಿಯ ಮೇಲೆ ನಿರ್ಮಾಣದ ಹಂತದಲ್ಲಿರುವ ಅಣೆಕಟ್ಟಿಗೆ ಸಂಬಂಧಿಸಿದಂತೆ ಇರುವ ಈ ಕಾದಂಬರಿಯಲ್ಲಿ ಜೀವನ ಮತ್ತು ಜಗತ್ತಿನ ಮಹತ್ವಪೂರ್ಣ ಚಿತ್ರಗಳು ಜೀವ ತುಂಬಿ ಮಾತನಾಡುತ್ತವೆ. ಈ ಚಿತ್ರದ ಬೆಳಕಿನಲ್ಲಿ ಕಾರ್ಮಿಕರು ಮತ್ತು ಎಂಜಿನಿಯರುಗಳ ಮಾನವೀಯ ಮುಖದ ಹೊಳಪು ಎದ್ದು ಕಾಣುತ್ತದೆ. ಅಣಿಕಟ್ಟು ನಿರ್ಮಾಣ ಕಾರ್ಯದಲ್ಲಿ ತೊಡಗಿದ ಕಾರ್ಮಿಕರ ಪ್ರಕಟ ಜಗತ್ತಿನ ಒಂದು ವಾಸ್ತವಿಕ ವಿವರಣೆ ಈ ಕಾದಂಬರಿಯಲ್ಲಿ ದೊರೆಯುತ್ತದೆ, ಅವರ ಅದೃಶ್ಯ ಜಗತ್ತಿನ ಅಲೌಕಿಕ ರಸಾಯನಗಳನ್ನು ಇದು ವಿಶ್ಲೇಷಿಸುತ್ತದೆ. ಕಾದಂಬರಿಯ ಪರಿವೇಶ ಹಾಗೂ ವಾತಾವರಣ ಮತ್ತು ಮನುಷ್ಯನ ಮನೋವಿಜ್ಞಾನದ ನಡುವೆ ಒಂದು ಅಂತಃ ಸಂಬಂಧವಿದೆ.
ಲೇಖಕಿಯು ಆಹಿರನ ನದಿಯ ಪ್ರಾಕೃತಿಕ ಸೌಂದರ್ಯವನ್ನು ಚಿತ್ರಣ ಮಾಡಿದಂತೆಯೇ, ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಮಾನವಶ್ರಮದ ಸೌಂದರ್ಯವನ್ನು ಚಿತ್ರಿತಗೋಳಿಸಿದ್ದಾರೆ.
ವ್ಯಾಪಕವಾದ ಭಿತ್ತಿಯ ಮೇಲೆ ಹಬ್ಬಿದ ಈ ಕಾದಂಬರಿಯ ಕಥಾ ಸಂವೇದನೆ ಸ್ತ್ರೀ-ಪುರುಷ ಸಂಬಂಧದ ಅನೇಕ ತೊಡಕುಗಳನ್ನು ವೈಚಾರಿಕ ಉತ್ತೇಜನೆಯಿಂದ ಬಿಡಿಸಲು ಪ್ರಯತ್ನಿಸಿದೆ. ಇದು ಈ ಕಾದಂಬರಿಯ ಮಾನವೀಯ ಮಗ್ಗುಲನ ವಾಸ್ತವಿಕ ಪಾಠವಾಗಿದೆ.
ಜ್ಞಾನಪೀಠ ಪುರಸ್ಕಾರದಿಂದ ಸಮ್ಮಾನಿತ ಲೇಖಕಿಯ ಒಂದು ರೋಚಕ ಕಾದಂಬರಿ ಇದು. ಇದೋ ಸಹೃದಯರ ಕೈಯಲ್ಲಿದೆ.

Share
Subscribe to our emails
Subscribe to our mailing list for insider news, product launches, and more.