ರಾಸಾಯನಿಕಗಳು ಮತ್ತು ದಿನನಿತ್ಯ ಅವುಗಳೊಂದಿಗಿನ ನಮ್ಮ ಒಡನಾಟ ಮಾಹಿತಿಯು ಗಾಬರಿ ಉಂಟುಮಾಡುತ್ತಿವೆ. ಜೀವನ ಶೈಲಿಯ ಬದಲಾವಣೆ ಅತಿಮುಖ್ಯ ಎಂಬುದನ್ನು ತಿಳಿಸಲಾಗಿದೆ. 'ಜಂಕ್' ಆಹಾರಗಳು ನಮ್ಮ ಯುವ ಪೀಳಿಗೆಯ ದೈನಂದಿನ ಚಟವಾಗಿದ್ದು ಯಾವಾಗ ಯಾವ ರೋಗ ಪ್ರಾರಂಭ ವಾಗಿ ಯವುದೋ ಎಂಬ ಭೀತಿ ಕಾಡುವಂತೆ ಮಾಡಿದೆ.
ಸಲಿಂಗಕಾಮ ಮತ್ತು ಅದರಿಂದುಂಟಾಗುವ ಲೈಂಗಿಕ ರೋಗಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ. ಹಲವಾರು ರೀತಿಯ ಚಿಕಿತ್ಸಾ ವಿಧಾನಗಳು, ಆಪ್ತಸಮಾಲೋಚನೆಗಳು, ಎಷ್ಟರ ಮಟ್ಟಿಗೆ ತೊಂದರೆಗಳು ಕಡಿಮೆಯಾಗುತ್ತಿವೆ ಮತ್ತು ಪರೀಕ್ಷೆಗಳ ಮೂಲಕ ಸೂಕ್ತ ಚಿಕಿತ್ಸಾ ಬದಲಾವಣೆಗಳು ಎಲ್ಲವನ್ನು ವಿವರಿಸಲಾಗಿದೆ. ಒಟ್ಟಿನಲ್ಲಿ ಪುರುಷರ ಲೈಂಗಿಕತೆ ಹಾಗೂ ಪ್ರಜನನ ಶಾಸ್ತ್ರಕ್ಕೆ ಸಂಬಂಧಿಸಿದ ಬಹು ಉಪಯುಕ್ತ ಮಾಹಿತಿಗಳನ್ನು ಈ ಪುಸ್ತಕ ಹೊಂದಿರುವುದರಿಂದ ವೈದ್ಯಕೀಯ ಸಾಹಿತ್ಯಕ್ಕೆ ಇದೊಂದು ಉತ್ತಮವಾದ ಸೇರ್ಪಡೆಯಾಗಿದೆ.
ಡಾ. ಎನ್. ಎಂ. ಶ್ಯಾಮ ಸುಂದರ ನಿವೃತ್ತ ಪ್ರಾಧ್ಯಾಪಕರು, ಅಂಗರಚನಾ ಶಾಸ್ತ್ರ ವಿಭಾಗ, ಜೆ.ಎಸ್.ಎಸ್. ವೈದ್ಯಕೀಯ ಮಹಾವಿದ್ಯಾನಿಲಯ, ಮೈಸೂರು