Skip to product information
1 of 2

Ragam

ಮನುಷ್ಯ ಮರವಾಗಬೇಕು!!!

ಮನುಷ್ಯ ಮರವಾಗಬೇಕು!!!

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 132

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಮನುಷ್ಯನ ಎದೆಯಿಂದ ಎದೆಗೆ ಅದಿಮರೂಪದಲ್ಲಿ ಹರಿದಾಡುವ ಪ್ರೀತಿಗಿಂತ ಹಿರಿದಾದ ಧರ್ಮ ಯಾವುದೂ ಇಲ್ಲ ಎನ್ನುವ ಸತ್ಯ ಇಲ್ಲಿನ ಬರಹಗಳಲ್ಲಿ ಚಂದಿರನ ಬೆಳಕಿನ ಹಾಗೆ ಓದುಗನ ಎದೆಯಗೂಡಿನಲ್ಲಿ ಇಳಿಯುತ್ತಲೇ ಹೋಗುತ್ತದೆ. ಒಳಹೊಕ್ಕ ಬೆಳಕು ನಮ್ಮೊಳಗಿನ ಮಾಲಿನ್ಯವನ್ನು ವಿರೇಚನಗೊಳಿಸುತ್ತಲೇ ಇರುತ್ತದೆ. ಹಾಗೇ, ಇಲ್ಲಿನ ಬರಹಗಳು ನಮ್ಮನ್ನು ಮತ್ತೆ ಮತ್ತೆ ಮನುಷ್ಯತ್ವದ ಪಾಜಗಟ್ಟೆಗೆ ತಂದು ನಿಲ್ಲಿಸುತ್ತವೆ. ಎಲ್ಲ ರೀತಿಯಲ್ಲೂ ಆದ್ರವಾಗಿರುವ, ಸೀಳಿ ಹೋಗಿರುವ, ಗಡಿರೇಖೆಗಳನ್ನು ನಿರ್ಮಿಸಿಕೊಂಡಿರುವ, xenophobeaದಿಂದ ಸದಾ ನರಳುತ್ತಿರುವ, ಅನ್ಯವಾದುದರ ರಕ್ತಕ್ಕೆ ಸುಖಾ ಸುಮ್ಮನೆ ಹಂಬಲಿಸುತ್ತಿರುವ ವರ್ತಮಾನದ ಈ ಸಂದರ್ಭದಲ್ಲಿ, ವಿಶ್ವವನ್ನು ಬೆಸೆಯುವ ರಾಗಂ ಅವರ ಸಾಹಿತ್ಯಕ ಹೆರ್ಕ್ಯೂಲಿಯನ್ ಸಾಹಸ ಸ್ವಾಗತಾರ್ಹವಾದುದು. ಅಧ್ಯಯನದ ವಿದ್ವತ್ತಿಗೆ ಇಂಥದ್ದೊಂದು ಧನಾತ್ಮಕ ರೂಪ ನೀಡಿದ ರಾಗಂ ಅವರು ಅಭಿನಂದನಾರ್ಹರು.

ಪ್ರೊ. ಚನ್ನಪ್ಪ ಕಟ್ಟಿ

ಈಗಾಗಲೇ ಅನೇಕ ಲೇಖಕರು ಕೀಟ್ಸ್ನನ್ನು ಕನ್ನಡಕ್ಕೆ ಪರಿಚಯಿಸಿದ್ದರೂ ಇಷ್ಟೊಂದು ಡಾ. ರಾಗಂ ಅವರ ಈ ಅನುವಾದಿತ ಕೃತಿ ಕನ್ನಡಕ್ಕೊಂದು ವಿಶೇಷ ಕೊಡುಗೆ. ಸಮಗ್ರವಾಗಿ ಕನ್ನಡಕ್ಕೆ ತಂದಿರಲಿಲ್ಲ. ಕೀಟ್ಸ್ನ ಕಾವ್ಯ ಮತ್ತು ಪತ್ರಗಳನ್ನು ಇಷ್ಟೊಂದು ಮೋಹದಿಂದ ಬೆನ್ನುಹತ್ತಿ, ಪ್ರತಿಯೊಂದು ಕವಿತೆ ಮತ್ತು ಪತ್ರಗಳನ್ನೂ ಅರ್ಥಮಾಡಿಕೊಳ್ಳಲು ಈ ಮಟ್ಟಿಗಿನ ಅನುವಾದ ಕೈಂಕರ್ಯ ಮಾಡಿದ ಇನ್ನೊಂದು ಉದಾಹರಣೆ ಕನ್ನಡ ಸಾಹಿತ್ಯಲೋಕದಲ್ಲಿ ಇದ್ದಂತೆ ಕಾಣುವುದಿಲ್ಲ ಕೀಟ್ಸ್ನ ಪತ್ರಗಳು ಅವನ ಜೀವನ ಚರಿತ್ರೆಯನ್ನಲ್ಲದೆ ಸಮಕಾಲೀನ ಸಾಂಸ್ಕೃತಿಕ ಇತಿಹಾಸವನ್ನೂ ಹೇಳುತ್ತವೆ ಎನ್ನುವುದು ಗಮನಾರ್ಹ. ಜಾನ್ ಕೀಟ್ಸ್ನ ಸ್ನೇಹಿತರಾದ ಹೈಡನ್, ರೇನಾಲ್ಡ್, ಜೇಮ್ಸ್ ರೈಸ್, ಟೇಲರ್, ವುಡ್ಹೌಸ್, ಲೀ ಹಂಟ್, ಚಾರ್ಲಸ್ ಬ್ರೌನ್, ಬೇಲಿ, ಸಹೋದರ ಜಾರ್ಜ್ ಮತ್ತು ಪ್ರೇಯಸಿ ಫ್ಯಾನಿ ಬ್ರೌನ್ರೊಡನೆ ವ್ಯವಹರಿಸಿದ ಪತ್ರಗಳಿವು. ಇಡೀ ಯುರೋಪಿಯನ್ ಸಾಹಿತ್ಯ ಚರಿತ್ರೆಯಲ್ಲಿ ಕೀಟ್ಸ್ನನ್ನು ಬಿಟ್ಟು ಈ ತೆರನಾದ ಪತ್ರಗಳನ್ನು ಬರೆದ ಬೇರೆ ಲೇಖಕನೊಬ್ಬ ನಮಗೆ ಸಿಗುವುದು ಅಪರೂಪ. 


View full details