Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಎಂ. ರಾಮರಾವ್ ಅವರ ಪೂರ್ಣ ಹೆಸರು ಮಠದ ರಾಮರಾವ್. ರಾಮರಾಯರು ಇಂಗ್ಲಿಷ್ ವಿವಿಧ ದೇಶಗಳ ಒಂಬತ್ತು ಜಾನಪದ ಕತೆಗಳನ್ನು ನಮ್ಮ ಸಮಾಜಕ್ಕೆ ಸರಿಹೊಂದುವಂತೆ ಪರಿವರ್ತಿಸಿ ಕನ್ನಡಿಸಿ ಈ ಪುಸ್ತಕದಲ್ಲಿ ಕೊಟ್ಟಿದ್ದೇನೆ. ಮೊದಲನೆಯ ಮುದ್ರಣದಲ್ಲಿದ್ದುದಕ್ಕಿಂತ ಒಂದು ಕತೆಯನ್ನು ಹೆಚ್ಚಾಗಿ ಸೇರಿಸಿ ಎಲ್ಲಾ ಕತೆಗಳ ಭಾಷೆಯನ್ನೂ ನಿರೂಪಣಾವೈಖರಿಯನ್ನೂ ಅಗತ್ಯವಿದ್ದೆಡೆ ತಿದ್ದಿ ಸರಿಪಡಿಸಿದ್ದೇನೆ. ಈ ಕತೆಗಳು ಜನಸಾಮಾನ್ಯರ ಕಲ್ಪನೆಯ ಕೂಸುಗಳು, ಪೂರ್ವಕಾಲದಲ್ಲಿ ಎಲ್ಲ ದೇಶಗಳ ಜನತೆಯ ಮನಸೂ ಹೇಗೆ ಒಂದೇ ತೆರನಾಗಿ ಕೆಲಸಮಾಡುತ್ತಿದ್ದಿತೆಂಬುದನ್ನು ನಾವು ಈ ಕತೆಗಳ ಮೂಲಕ ಸ್ವಲ್ಪಮಟ್ಟಿಗೆ ಅರಿತುಕೊಳ್ಳಬಹುದು. ಕಲ್ಪನಾಪ್ರಧಾನವಾದ ಈ ಕತೆಗಳು ಮಕ್ಕಳಿಗೆ ಆಕರ್ಷಕವಾಗುವುದರಲ್ಲಿ ಸಂಶಯವೇ ಇಲ್ಲ.
Be the first to know about new collections and special offers.