ವಿದುರನೆಂದರ್: ಪ್ರಭುತ್ವಕ್ಕೆ ನಿಷ್ಠನಾಗಿದ್ದೂ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ, ವ್ಯವಸ್ಥೆ ಹಾಳಾಗಿದೆಯೆಂದು ಅದನ್ನು ನಿರಾಕರಿಸದೆ, ಸರಿಪಡಿಸುವ ಪ್ರಬುದ್ಧತೆ; ವ್ಯಕ್ತಿಗೌರವವನ್ನು ಕಳೆದುಕೊಳ್ಳದೆಯೇ ಆ ವ್ಯಕ್ತಿಯ ತಪ್ಪನ್ನು ಹೇಳುವ ಸಹನಶೀಲತೆ: ಪ್ರೀತಿಯ ತನ್ನವರು ಲೋಕವಿರೋಧಿಯಾದಾಗ ಪರಿತ್ಯಾಗ ಮಾಡುವ ಮೋಹರಹಿತತೆ, ಬಲ, ಹಣ, ಪ್ರಭಾವ ಯಾವುದಕ್ಕೂ ಬಗ್ಗದ-ಜಗ್ಗದ ನ್ಯಾಯನಿಷ್ಟುರತೆ,
ವಿದುರ: ಲೋಕಹಿತೈಷಿ; ದೇಶನಿಷ್ಠ, ಕುಟುಂಬಪ್ರೇಮಿ, ಪ್ರಜಾರಕ್ಷಕ: ಸಿದ್ಧಬುದ್ಧಪ್ರಬುದ್ಧ: ಸಹಿಷ್ಣು; ನ್ಯಾಯತತ್ತರ; ಸತ್ಯವಾದಿ, ಧೀರ, ಮಾರ್ಗದರ್ಶಿ; ರಾಜನೀತಿವಿಹಾರದ ಶಾಸ್ತ್ರಜ್ಞ, ಧೀಮಂತ, ನಿರ್ಮೋಹಿ, ತ್ಯಾಗಿ, ವಿರಾಗಿ, ವಿದುರನ ಈ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಕೃತಿ.