Skip to product information
1 of 2

Koundinya

ವೀರ ಸಿಂಧೂರ ಲಕ್ಷ್ಮಣ

ವೀರ ಸಿಂಧೂರ ಲಕ್ಷ್ಮಣ

Publisher - ವೀರಲೋಕ ಬುಕ್ಸ್

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 164

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹರಿಯ ಬಿಡುತ್ತಾರೆ. ನದಿ ತನ್ನ ಜಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಜ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿವ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ ಫೈಜ್ ನೋವಿಗೆ ಮಿಡಿಯುತ್ತಾರೆ. ನೋವಿಗೆ ಮಿಡಿಯದ ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ.

ಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತದೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು.

ಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ. ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ತಡಕಾಡುತ್ತವೆ. ಒಂದು ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ.

ಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಖಂಡಿತ ನಿಮಗೆ ಮೋಸಮಾಡುವುದಿಲ್ಲ.

-ಸದಾಶಿವ ಸೊರಟೂರು
ಕವಿ, ಹೊನ್ನಾಳಿ
View full details