Chaduranga
ಉಯ್ಯಾಲೆ
ಉಯ್ಯಾಲೆ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 260
Type - Paperback
Couldn't load pickup availability
ಸರ್ವಮಂಗಳೆಯನ್ನು ಸೃಷ್ಟಿಸಿ ಓದುಗರ ಮನಸ್ಸನ್ನು ತಮ್ಮತ್ತ ಸೆಳೆದುಕೊಂಡ ಗೆಳೆಯ ಚದುರಂಗರು ರಾಧೆಯನ್ನು, ಶೇಷಗಿರಿಯನ್ನು, ಕೃಷ್ಣಗೌಡನನ್ನು, ಪ್ರಭಾವತಿಯನ್ನು-ಜೀವಂತವಾದ ಹಲವು ಪಾತ್ರಗಳನ್ನು- ನಮ್ಮ ಮುಂದೆ ನಿಲ್ಲಿಸಿದ್ದಾರೆ. ಸುಂದರಿ ರಾಧೆ, ಪುಸ್ತಕಪ್ರಿಯ ಶೇಷಗಿರಿ, ಜೀವನೋಲ್ಲಾಸಿ ಕೃಷ್ಣಗೌಡ, ಸುಕುಮಾರಿ ಮುಗ್ಧ ಪ್ರಭಾವತಿ, ಒಳ್ಳೆಯವನಾದರೂ ಪುಸ್ತಕದ ಹಾಳೆಯಲ್ಲಿ ಹುದುಗಿ. ಹೆಂಡತಿ ರಾಧೆಯ ಸುತ್ತ ಅಸಹನೆಯ ಕೋಟೆ ಬೆಳೆಯಲು ಕಾರಣನಾಗಿ ಓದುಗರಿಂದ ಸಹಾನುಭೂತಿಯ ನಿಟ್ಟುಸಿರನ್ನು ಸಂಪಾದಿಸುವ ಶೇಷಗಿರಿ, ರಾಧೆ- ಶೇಷಗಿರಿಗಳ ನಡುವೆ ಬಂದು, ಪ್ರಭಾವತಿಯ ಪ್ರೀತಿಯನ್ನೂ ರಾಧೆಯ ಒಲವನ್ನೂ ಗಳಿಸಿ, ಅವರ ಸಂಸಾರದಲ್ಲಿ ಸ್ನೇಹದ ಒರತೆಯನ್ನು ಹರಿಸಲೆತ್ನಿಸಿದ ಕೃಷ್ಣಗೌಡ, ಜನ್ಮತಃ ಕಲಾವಿದೆಯಾದ ಪುಟ್ಟ ಪ್ರಭಾವತಿ. ಹೀಗೆ ಈ ಪಾತ್ರಗಳು ನಿಚ್ಚಳವಾಗಿ ನಿಲ್ಲುತ್ತವೆ.
***
ರಾಧೆ ಕೃಷ್ಣಗೌಡರು ಪರಸ್ಪರ ಆಕರ್ಷಣೆಗೆ ಗುರಿಯಾಗಿದ್ದಾಗ ಬರುವ ಹಾವಿನ ಪ್ರಸಂಗ ಎಷ್ಟು ಎದೆ ನಡುಗಿಸುವುದೋ ಅಷ್ಟೇ ಮಾರ್ಮಿಕವಾಗಿದೆ. ಚದುರಂಗರು ಪ್ರಯತ್ನಿಸಿದರೆ ಮನಸ್ಸಿನ ಅಂತರಾಳದ నానా ಪದರಗಳನ್ನು ಬಿಚ್ಚಿರಿಸಬಲ್ಲರು ಎಂಬುದಕ್ಕೆ ಇದು ದ್ಯೋತಕವಾಗಿದೆ.
- ಎಚ್ಚೆಸ್ಕೆ
***
ಈ ಕಾದಂಬರಿಯಲ್ಲಿ, ಆಳವೂ ಅನಂತವೂ ಆದ ಸಮಸ್ಯೆಯ ಪೃಥಕ್ಕರಣ ನಡೆದಿದೆ. ಸಮಾಜದ ಕಟ್ಟಿನಲ್ಲಿ ಉಯ್ಯಾಲೆಯಾಡುವ ಹೆಣ್ಣು, ಜೀವನದ ಮುಲುಕು ನೋವು ಇದರಲ್ಲಿದೆ. ಅಷ್ಟೇ ಅಲ್ಲ, “It is a Saga on Love itself"
- ಕೆ. ನರಸಿಂಹಮೂರ್ತಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.