Skip to product information
1 of 2

Mruthyunjaya Rumale

ಉಳ್ಳವರ ಶಿವಾಲಯ ದೇಹ ದೇಗುಲ

ಉಳ್ಳವರ ಶಿವಾಲಯ ದೇಹ ದೇಗುಲ

Publisher - ಅಮೂಲ್ಯ ಪುಸ್ತಕ

Regular price Rs. 650.00
Regular price Rs. 650.00 Sale price Rs. 650.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 540

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

ಬಸವಣ್ಣನವರ ‘ಉಳ್ಳವರು ಶಿವಾಲಯ ಮಾಡುವರು...’ ಎಂಬ ಒಂದು ವಚನವನ್ನು ಆಧುನಿಕ ಕಾಲಘಟ್ಟದಲ್ಲಿ ನೂರಾರು ಜನ ವಿದ್ವಾಂಸರು ಧಾರ್ಮಿಕ-ಆಧ್ಯಾತ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪರಿಪ್ರಮಾಣದಲ್ಲಿ ಉದಾಹರಣೆಗಳು ಇಲ್ಲ. ನವೋದಯ-ನವ್ಯ-ದಲಿತ ಬಂಡಾಯ ಎಲ್ಲ ಸಾಹಿತ್ಯಿಕ ನೆಲೆಯಲ್ಲಿ ಈ ವಚನವು ಬಹುಚರ್ಚಿತವಾಗಿರುವುದು ಅದರ ಬಹುಮುಖ ಆಯಾಮಕ್ಕೆ ಸಾಕ್ಷಿಯಾಗಿದೆ. ಇಂತಹ ಅಮೂಲ್ಯ ಚಿಂತನೆಗಳನ್ನು ವರ್ತಮಾನದ ಪರಿಪ್ರೇಕ್ಷö್ಯದಲ್ಲಿಟ್ಟು ನೋಡುವ ಒಂದು ಅಭೂತಪೂರ್ವ ಚಿಂತನಾಕ್ರಮವನ್ನು ಡಾ. ಮೃತ್ಯುಂಜಯ ರುಮಾಲೆ ಅವರು ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. 

 ಡಾ. ರುಮಾಲೆ ಅವರು ಈ ವಚನಾನುಸಂಧಾನದ ಕ್ರಿಯೆಯನ್ನು ಅನೇಕ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಕಳೆದ ವರ್ಷ ಅವರ ಬದುಕಿನ ಒಂದು ಭಾಗವಾಗಿದ್ದ ಶ್ರೀಮತಿ ವಿದ್ಯಾ ಮೆಡಂ ಅವರ ಆಕಸ್ಮಿಕ ಅಗಲುವಿಕೆಯಿಂದ ಡಾ. ರುಮಾಲೆ ಗುರುಗಳು ಅಕ್ಷರಶಃ ವಿಷಾದಯೋಗದ ಅವಸ್ಥೆಯಲ್ಲಿದ್ದರು. ಆ ನೋವಿನಿಂದ ಹೊರಬರಲು ಈ ಕೃತಿಯನ್ನು ಪೂರ್ಣಗೊಳಿಸಿ, ಕೃತಿಯನ್ನು ಅವರಿಗೆ ಅರ್ಪಣೆ ಮಾಡಿರುವುದು ಔಚಿತ್ಯಪೂರ್ಣವಾದುದು. 

 ಬಸವಣ್ಣನವರ ವಚನಗಳನ್ನು ಹಲವು ಆಯಾಮಗಳಲ್ಲಿ ಅಧ್ಯಯನ ಮಾಡಬೇಕೆನ್ನುವ ಅಧ್ಯಯನಾಸಕ್ತರಿಗೆ ಇದೊಂದು ಮಾದರಿ ಆಕರ ಕೈಪಿಡಿಯಾಗಿದೆ. ಮುಖ್ಯವಾಗಿ ಲಿಂಗಾಯತ ಧರ್ಮಾನುಯಾಯಿಗಳು ಇಂತಹ ಕೃತಿಗಳನ್ನು ಅವಶ್ಯವಾಗಿ ಓದಲೇಬೇಕು. 

View full details

Talk about your brand

Share information about your brand with your customers. Describe a product, make announcements, or welcome customers to your store.