Firat Sunel, To Kannada : Dr. Madhuri Kulkarni
ದಿ ಲೈಟ್‌ಹೌಸ್ ಫ್ಯಾಮಿಲಿ
ದಿ ಲೈಟ್‌ಹೌಸ್ ಫ್ಯಾಮಿಲಿ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 118
Type - Paperback
Couldn't load pickup availability
ಯುದ್ಧ, ವಲಸೆ ಮತ್ತು ಅದಮ್ಯ ಮಾನವ ಚೇತನವನ್ನು ಕುರಿತಾದ ಹೃದಯಸ್ಪರ್ಶಿ ಕಥನ ಇಲ್ಲಿ ಕಗ್ಗತ್ತಲ ಕಾಲದಲ್ಲಿಯೂ ಭರವಸೆಯ ಬೆಳಕೊಂದು ಹೊಳೆಯುವ ಚಮತ್ಕಾರವಿದೆ. ಈ ಕಾದಂಬರಿ ಕಾಡುವ ಕತೆಯಾಗಿ ನಿಮ್ಮೊಳಗೆ ಉಳಿಯುತ್ತದೆ.
-ವಿಕಾಸ್ ಸ್ವರೂಪ್
(ಎಂಟು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದ 'ಸ್ಲಮ್ ಡಾಗ್ ಮಿಲೇನಿಯರ್' ಸಿನಿಮಾಗೆ ಪ್ರೇರಿತವಾದ Q&A ಪುಸ್ತಕದ ಲೇಖಕ)
ಯುದ್ಧವು ಏಕಶಿಲೆಯ ವಿಗ್ರಹವನ್ನು ಮತ್ತೆ ಜೋಡಿಸದಂತೆ ಸ್ಫೋಟಿಸುತ್ತದೆ. ಯುದ್ಧದ ನಂತರದ ದೇಶವು, ಜೀವಂತವಾಗಿ ನಳನಳಿಸುತ್ತಿದ್ದ ಬದುಕಿನ ಛಿದ್ರ ಕಳೇಬರದಿಂದ ರೂಪುಗೊಂಡ ಕೊಲಾಜು. ಈ ಕಾದಂಬರಿ ಕಾಣಿಸಹೊರಟಿರುವುದೂ ಅಂಥದೇ ಸಂಕಟವನ್ನು, ಯುದ್ಧವನ್ನು ಹೇರಿದ ನೆಲದ ಜನರ ಹೊಯ್ದಾಟ, ಅಸಹಾಯಕತೆ, ಪಾಪಪ್ರಜ್ಞೆಗಳನ್ನು ಪುಟ್ಟ ಕಣ್ಣುಗಳ ಸಾಂದ್ರ ಭಾವಪ್ರಪಂಚದ ಮೂಲಕ ನಮ್ಮೊಳಗೆ ಹನಿಹನಿಯಾಗಿ ಬಸಿಯುತ್ತದೆ. ಈ ಕಾರಣಕ್ಕೇ ಮನುಷ್ಯಪ್ರಜ್ಞೆಯ ಮೂಲದಲ್ಲಿ ಬೇರೂರಿರುವ ಆರ್ದ್ರತೆ ಇಲ್ಲಿ ಸ್ಥಾಯಿಭಾವವಾಗಿದೆ. ಹಾಗಂತ ಇದು ನಮ್ಮನ್ನು ವೇದನೆಯಲ್ಲಿ ತೊಯ್ಯಿಸುವ ಕತೆಯಲ್ಲ. ದಟ್ಟವಾದ ವಿಷಾದವನ್ನು ಗೊರಟೆಯೊಳಗಿರಿಸಿಕೊಂಡೂ ಸಿಹಿಯಾದ ತಿರುಳ ಚರ್ಮ ಹೊದ್ದಿದೆ. ತಂತಿ ಕಿತ್ತು ಬಿದ್ದ ಏಕತಾರಿಯ ವಿಷಣ್ಣತೆಯ ನಡುವೆಯೂ ಜೀವಚೈತನ್ಯವ ಮೊಗೆಮೊಗೆದು ಉಣಿಸುತ್ತದೆ.
-ಕಾವ್ಯಾ ಕಡಮೆ
Share

Subscribe to our emails
Subscribe to our mailing list for insider news, product launches, and more.