Skip to product information
1 of 1

Dr. B. M. Hegde

ಸುಖ ಸಂಪದ

ಸುಖ ಸಂಪದ

Publisher - ನವಕರ್ನಾಟಕ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಪ್ರೊ|| ಬೆಳ್ಳೆ ಮೋನಪ್ಪ ಹೆಗ್ಡೆಯವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು, ತರಬೇತಿಯನ್ನು, ದೇಶ-ವಿದೇಶಗಳಲ್ಲಿ ಪಡೆದಿರುವ ಹೃದಯತಜ್ಞ. ಹಾರ್ವಡ್್ರ ವೈದ್ಯಕೀಯ ಕಾಲೇಜಿನ ಪ್ರಸಿದ್ಧ ಹೃದಯತಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಪ್ರೊ| ಬರ್ನಾರ್ಡ್ ಟೌನ್ ಅವರೊಡನೆಯೂ ಕೆಲಕಾಲ ಕೆಲಸ ಮಾಡಿದ ಅನುಭವ ಇವರದು.

ಪ್ರೊ| ಹೆಗ್ಡೆಯವರು ಓರ್ವ ಅತ್ಯುತ್ತಮ ಪ್ರಾಧ್ಯಾಪಕ, ನಿಷ್ಠ ಸಂಶೋಧಕ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸಲ್ಲಿಸುತ್ತಿರುವ ಸೇವೆ ಪೊ|| ಹೆಗ್ಡೆಯವರ ಅಂತಾರಾಷ್ಟ್ರೀಯ ಮಾನ್ಯತೆಗೆ ಹಿಡಿದ ಕನ್ನಡಿ, ಇವರು ಭಾರತೀಯ ವೈದ್ಯ ಸಂಘದಿಂದ

ಕೊಡಲ್ಪಡುವ ಪ್ರತಿಷ್ಠಿತ “ಪ್ರಖ್ಯಾತ ವೈದ್ಯ ಪ್ರಶಸ್ತಿ ಪುರಸ್ಕೃತರು. ಆರೋಗ್ಯ ಮತ್ತು ಭಾಷಣ ಕಲೆಯ ಬಗ್ಗೆ ಇವರು ಬರೆದಿರುವ ಅನೇಕ ಪುಸ್ತಕಗಳು ಜನಪ್ರಿಯವಾಗಿವೆ. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಇವರ ಪ್ರಮುಖ 'ಹವ್ಯಾಸ'. ಸಮುದಾಯದ ಆರೋಗ್ಯ ಪ್ರವರ್ಧನೆಗೆ ಇವರು ನೀಡುತ್ತಿರುವ ಕಾಣಿಕೆ

ಸ್ತುತ್ಯರ್ಹವಾದದ್ದು. “ಅವರೊಬ್ಬ ಹೃದಯವಂತ ಹೃದಯತಜ್ಞ'' ಎಂದು ಸುಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಶ್ರೀ ನಾನಿ ಪಾಲ್ಟಿವಾಲಾರವರು ಇವರ ಉದಾತ್ತ ವ್ಯಕ್ತಿತ್ವವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಡಾ|| ಬಿ. ಎಂ. ಹೆಗ್ಡೆ ಅವರು ಹಲವು ವರ್ಷಗಳ ಕಾಲ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಉನ್ನತ ಹುದ್ದೆಯಲ್ಲಿ ದುಡಿದು, ಮಣಿಪಾಲದ ಪ್ರತಿಷ್ಠಿತ 'ಮಾಹೆ' ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನಿವೃತ್ತರಾಗಿದ್ದಾರೆ. ಪೊ|| ಹೆಗ್ಡೆ ಅವರು ಬರೆದ 'How to Maintain Good Health' ಎಂಬ ಜನಪ್ರಿಯ ಕೃತಿಯನ್ನು ಉಡುಪಿಯ ಡಾ|| ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಹಾಬಲೇಶ್ವರ ರಾವ್ ಅನುವಾದಿಸಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)