Skip to product information
1 of 1

Shylaja Sureshrao Nayak

ಸೂತ್ರಧಾರ ಮತ್ತು ಇತರ ಕಥೆಗಳು

ಸೂತ್ರಧಾರ ಮತ್ತು ಇತರ ಕಥೆಗಳು

Publisher -

Regular price Rs. 120.00
Regular price Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸದ್ಯ ಹದಿಮೂರು ಕತೆಗಳಿರುವ ಶೈಲಜಾ ಸುರೇಶ್‌ರಾವ್ ನಾಯಕ್ ಅವರ ಕಥಾ ಸಂಕಲನ ಸೂತ್ರಧಾರ ಮತ್ತು ಇತರ ಕತೆಗಳು ಕೂಡಾ ಬಾಳಿನ ಕ್ರಮಗಳ ಅಭಿವ್ಯಕ್ತಿಯ ಭಿನ್ನ ಮಾದರಿಗಳೇ ಆಗಿವೆ. ಅಕ್ಷರಗಳಲ್ಲಿ ದಾಖಲಿಸಿಟ್ಟ ಇಲ್ಲಿನ ಬಾಳಿನ ಕ್ರಮಗಳು ಅನೇಕ ಅನುಭವಗಳನ್ನು ಮತ್ತು ಸಂವೇದನೆಗಳನ್ನು ಹಾಸುತ್ತವೆ. ನಾನು ಕಥೆಗಳ ಬಗ್ಗೆ ಸಾರಾಂಶ ಬರೆಯುವ ಅಥವಾ ಅದನ್ನು ಅರ್ಥೈಸುವ ಸಾಹಸಕ್ಕೆ ಹೋಗಲಾರೆ. ಬದಲಿಗೆ ಇಲ್ಲಿನ ಸಾಮಾನ್ಯ ಮತ್ತು ವಿಶೇಷ ಎನಿಸುವ ಸಂಗತಿಗಳನ್ನು ಕುರಿತು ಹಂಚಿಕೊಳ್ಳಲು ಬಯಸುತ್ತೇನೆ. ಇಲ್ಲಿನ ಬಹುತೇಕ ಕತೆಗಳು ಉತ್ತಮ ಪುರುಷ (ನಾನು)ದಲ್ಲೇ ಆರಂಭವಾಗುತ್ತವೆ. ಇದು ಒಂದು ಬಗೆಯಲ್ಲಿ ಸಾಕ್ಷಿ ಪ್ರಜ್ಞೆಯ ಸರಳ ಕಥನಕ್ರಮ ಕೂಡಾ.ಕಂಡದ್ದು ಮತ್ತು ಹತ್ತಿರದಿಂದ ಅನುಭವಿಸಿದ ಸಂಗತಿಗಳನ್ನೇ ಅನ್ಯ ಹೆಸರುಗಳಿಂದ ಚಿತ್ರಿಸುವ ಈ ಕ್ರಮವು ಸ್ವಗತದ ಧಾಟಿಯದ್ದು. 'ಕತೆಯೊಂದನ್ನು ಹೇಳುವೆ' ಎಂದು ಹೊರಟಾಗೆಲ್ಲ 'ನಾನು ಇದನ್ನು ಕಂಡೆ, ಇದನ್ನು ಕೇಳಿದೆ, ನಿಮಗೂ ಹೇಳಬೇಕು' ಎಂಬ ಹಂಬಲ ಇಲ್ಲಿ ಹರಿದಾಡುತ್ತದೆ. ಮತ್ತು ಅದು ಹೆಚ್ಚು ಕಲಾತ್ಮಕತೆ ಹಾಗೂ ಸಂಕೀರ್ಣತೆಯನ್ನು ಬಯಸದೆ, ಸರಾಗವಾಗಿ ಕತೆಯನ್ನು ಒಪ್ಪಿಸುವ ನೆಲೆಯಲ್ಲಿಯೇ ಸಾಗುತ್ತದೆ ಕೂಡ.ಶೈಲಜಾ ಅವರ ಇಲ್ಲಿನ ಕಥನಕ್ರಮ ಡಾ ಸರಳ ಮತ್ತು ನಿರಾಡಂಬರ. ಇದು ಕತೆ, ಇಲ್ಲಿ ಕೇಳಿ, ಹೀಗಿದೆ ಎಂದು ಮುಗಿಸಿಬಿಡುವ ಸಾಂಪ್ರದಾಯಿಕ ಕಥನ ಶೈಲಿ ಇದು.

-ಮುನ್ನುಡಿಯಿಂದ (ವಾಸುದೇವ ನಾಡಿಗ್)

-ಪ್ರಕಾಶಕರು - ಸಾಹಿತ್ಯ ಲೋಕ ಪಬ್ಲಿಕೇಷನ್ಸ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)