M. Vyasa
ಸ್ನಾನ
ಸ್ನಾನ
Publisher - ಅಂಕಿತ ಪುಸ್ತಕ
- Free Shipping Above ₹400
- Cash on Delivery (COD) Available*
Pages - 152
Type - Paperback
Couldn't load pickup availability
ಕಳೆದ ನಾಲ್ಕು ದಶಕಗಳಿಂದ, ಅತ್ಯಂತ ಸೂಕ್ಷ್ಮ ಸಂವೇದನೆಯ ತಲ್ಲಣ, ಆಘಾತಗಳನ್ನು ಶಬ್ದಗಳಿಂದ ಸ್ಪರ್ಶಿಸುತ್ತ ಬಂದಿರುವ ಅಪರೂಪದ ಕತೆಗಾರ ಎಂ. ವ್ಯಾಸ. ಅವರ ಮುನ್ನೂರಕ್ಕೂ ಹೆಚ್ಚು ಕತೆಗಳು ನಾಡಿನ ಎಲ್ಲ ಪತ್ರಿಕೆಗಳಲ್ಲಿ ಅಚ್ಚಾಗಿವೆ. ದುರ್ಗಾಪುರ, ಶಂಕರೀನದಿ, ಬೆಳದಿಂಗಳಿನ ಕಿಡಿಗೆ ಪ್ರಜ್ವಲಿಸುವ ಮನಸ್ಸಿನ ಕಾಡು, ವಿಶ್ವಲ ಏಕಾಂಗಿ ಹೆಂಗಸರು, ಅತ್ಮಲೋಲುಪತೆಯ ಕುರೂಪದಲ್ಲಿ ತೆವಳುವ ಗಂಡಸರು,.... ಇದು ವ್ಯಾಸ ಪ್ರಪಂಚ. ವೈಭವವನ್ನು ಕಂಡು ಕಂಗೆಡುವ ದುರ್ಬಲನ ನೋವು, ಶಬ್ದಕ್ಕೆ ಹಿಂಜರಿವ ಉಮ್ಮಳ-ವ್ಯಾಸರ ಕಥೆಗಳಿಂದ ಹೊಮ್ಮುವ ಸ್ವರಗಳು. ಅಸಂಖ್ಯ ಪತ್ರಿಕೆಗಳಲ್ಲಿ ಬಿಡಿಬಿಡಿಯಾಗಿ ಪ್ರಕಟವಾದ ಅವರ ಮುನ್ನೂರಕ್ಕೂ ಹೆಚ್ಚು ಕತೆಗಳಿಂದ ಆಯ್ದು ಹತ್ತಾರು ಕತೆಗಳನ್ನು ಸಂಗ್ರಹರೂಪದಲ್ಲಿ ಅವರ ಮಕ್ಕಳು ಹೊರ ತಂದಿದ್ದಾರೆ. ಇದ್ದಾಗಲೇ ನಾಡಿನ ಮರವೆಗೆ ತುತ್ತಾಗಿರುವ ಈ ಸ್ಪೋಪಜ್ಞ ಸಾಹಿತಿಯ ಮೂರು ಅಪರೂಪದ ಕಿರು ಕಾದಂಬರಿಗಳು ಇಲ್ಲಿವೆ.
-ಜಯಂತ ಕಾಯ್ಕಿಣಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.