Dr. Rajan Deshpande
ಶ್ರೇಷ್ಠ ಜೀವನಕ್ಕಾಗಿ 10 ಆದರ್ಶಗಳು
ಶ್ರೇಷ್ಠ ಜೀವನಕ್ಕಾಗಿ 10 ಆದರ್ಶಗಳು
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 129
Type - Paperback
Couldn't load pickup availability
ರಾಜನ್ ದೇಶಪಾಂಡೆಯವರು ಈ ಕೃತಿಯ ಉದ್ದಕ್ಕೂ ತಾವು ಚರ್ಚಿಸುತ್ತಿರುವ ವಿಷಯವನ್ನು, ತಮ್ಮ ವಿಸ್ತಾರವಾದ ಓದು ಆಸಕ್ತಿ ಮತ್ತು ಅನುಭವಗಳಿಂದ ಶ್ರೀಮಂತಗೊಳಿಸಿದ್ದಾರೆ. ಸಾಂದರ್ಭಿಕವಾಗಿ ಉದ್ಧರಿಸುವ ಜಗತ್ತಿನ ಶ್ರೇಷ್ಠ ವ್ಯಕ್ತಿತ್ವಗಳ ನುಡಿಗಳು ಕೃತಿಯಲ್ಲಿ ಚರ್ಚಿಸುತ್ತಿರುವ ಸಂಗತಿಗಳಿಗೆ ಅಧಿಕೃತತೆಯನ್ನು ತಂದುಕೊಡುತ್ತವೆ. ಮತ್ತು ವಿವಿಧ ಸಂಗತಿಗಳನ್ನು ಚರ್ಚಿಸುವಾಗ, ನಿರೂಪಿಸುವ ಹಲವಾರು ನೈಜ ಮತ್ತು ಕಾಲ್ಪನಿಕ ಕಥನಗಳು ಆ ಸಂಗತಿಗಳನ್ನು ದೃಷ್ಟಾಂತಗೊಳಿಸುತ್ತ ಮನನವಾಗುವಂತೆ ಮಾಡುತ್ತವೆ. ರಾಜನ್ ಅವರ ನಿರೂಪಣೆಯ ಇಂತಹ ರೀತಿಗಳು ಕೃತಿಯ ಓದನ್ನು ಹೃದ್ಯವಾಗಿಸುತ್ತವೆ. ಇವುಗಳ ಜೊತೆಗೇ, ಅವರ ವೈಜ್ಞಾನಿಕ ಮನೋಭಾವ ಮತ್ತು ತಿಳುವಳಿಕೆ, ಮತ್ತು ಅವರ ಶಾಸ್ತ್ರೀಯ ನಿರೂಪಣೆ, ಕೃತಿಗೆ ಒಂದು ಬಗೆಯ ಅಧಿಕೃತತೆ ಮತ್ತು 'ಪಠ್ಯ'ದ ವಿಶೇಷ ಗಾಂಭೀರ್ಯವನ್ನು ತಂದುಕೊಟ್ಟಿವೆ.
'ಶ್ರೇಷ್ಠ ಜೀವನಕ್ಕಾಗಿ (ಯಶಸ್ವೀ ಜೀವನಕ್ಕಾಗಿ ಅಲ್ಲ ಎನ್ನುವುದನ್ನು ಗಮನಿಸಿರಿ) ಹತ್ತು ಆದರ್ಶಗಳು 'ದಂತಹ ಕೃತಿಯನ್ನು ರಚಿಸಲು ಆರೋಗ್ಯಪೂರ್ಣ ಸ್ವಾಸ್ಥ್ಯದ ಸಮಾಜಕ್ಕಾಗಿ ತಹತಹಿಸುವ ವಿಶೇಷ ಮನೋಸ್ಥಿತಿ ಬೇಕಾಗುತ್ತದೆ. ರಾಜನ್ ದೇಶಪಾಂಡೆಯವರ ವ್ಯಕ್ತಿತ್ವವು ಅಂತಹ ಪಕ್ವತೆಯನ್ನು ಸಾಧಿಸಿರುವಂತಹದು. ಅವರ ಸದುದ್ದೇಶದ ಕಾಂಕ್ಷೆಯನ್ನು ತಣಿಸುವ ಸಾರ್ಥಕ ಕೃತಿಯಾಗಿದೆ, 'ಶ್ರೇಷ್ಠ ಜೀವನಕ್ಕಾಗಿ ಹತ್ತು ಆದರ್ಶಗಳು'. ಈ ಕೃತಿಗಾಗಿ ನಾನು ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.
-ರಾಘವೇಂದ್ರ ಪಾಟೀಲ, ಧಾರವಾಡ
Share

Subscribe to our emails
Subscribe to our mailing list for insider news, product launches, and more.