ಕಥೆ ಹೇಳುವುದರಲ್ಲಿ ಸುಧಾ ಅಜ್ಜಿ ಪ್ರಸಿದ್ದರು. ತಮ್ಮ ಕಥಾ ವಸ್ತುವಿನ ಮೂಲಕ ಮಕ್ಕಳ ಮನಸ್ಸಿಗೆ ಹತ್ತಿರವಾಗುವ ಶ್ರೀಮತಿ ಸುಧಾಮೂರ್ತಿ ಅವರ ಅನೇಕ ಮಕ್ಕಳ ಪ್ರಸ್ತಕಗಳು ಪ್ರಸಿದ್ಧಿಯನ್ನು ಪಡೆದಿವೆ. ಈ ದಿಸೆಯಲ್ಲಿ ಶ್ರೀಮತಿ ಸುಧಾಮೂರ್ತಿಯವರು ಕಥಾ ಜಗತ್ತಿನಲ್ಲಿ ಪ್ರಸಿದ್ಧರು. ಅಷ್ಟೇ ಏಕೆ ಕಾದಂಬರಿ, ಪ್ರವಾಸ ಸಾಹಿತ್ಯ, ಕಂಪ್ಯೂಟರ್ ಲೋಕದಲ್ಲೂ ಗುರುತಿಸಬಹುದಾದ ಅಪ್ಪಟ ಕನ್ನಡದ ಪ್ರತಿಭೆ, ಸರಳ ಶೈಲಿಯಲ್ಲಿ ಒಡಮೂಡುತ್ತಿರುವ ಇವರ ಬರಹಗಳು ಸಾಮಾನ್ಯ ಓದುಗರಿಗೆ ಅರ್ಥವಾಗುವುದರ ಜೊತೆಗೆ ನೀತಿಯುಕ್ತವಾಗಿವೆ. ಇಂತಹ ಒಬ್ಬ ಉತ್ತಮ ಬರಹಗಾರ್ತಿಯಿಂದ ಇನ್ನಷ್ಟು ಕನ್ನಡದ ಕೆಲಸಗಳು ಆಗಲಿ ಎಂದು ಹಾರೈಸೋಣವೇ.