Skip to product information
1 of 2

M. R. Kamala

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ

Publisher - ಅಮೂಲ್ಯ ಪುಸ್ತಕ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

2007ರ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ ಪುರಸ್ಕೃತ ಕೃತಿ…

ಮಾಯಾ ಏಂಜೆಲೊ, ಆಧುನಿಕ ವಿಶ್ವಕಾವ್ಯದಲ್ಲಿ ಬಹು ಮುಖ್ಯ ಹೆಸರು. ಕಪ್ಪು ಜನಾಂಗದ ಈ ಮಹಿಳೆ ತನ್ನ ಕಾವ್ಯದ ಮಾಂತ್ರಿಕ ಶಕ್ತಿಯಿಂದ ಸಾಹಿತ್ಯಾಸಕ್ತರನ್ನು ಮರುಳು ಮಾಡಿರುವುದೇ ಒಂದು ಸೋಜಿಗವಾಗಿದೆ. ನೊಂದ ಜನಾಂಗದ ಆಶೋತ್ತರ, ನೋವು-ನಲಿವುಗಳನ್ನು ತನ್ನ ಅಭಿವ್ಯಕ್ತಿಯ ಮುಖ್ಯ ಧಾರೆಯಾಗಿಸಿಕೊಂಡಿರುವ ಈಕೆಯ ಕವಿತೆಗಳು ಹೊಸ ಓದುಗನೊಬ್ಬ ಆಯುವ ವಿಶ್ವದ ಅತ್ಯುತ್ತಮ ಇಪ್ಪತ್ತೈದು ಕವಿತೆಗಳಲ್ಲಿ ಸ್ಥಾನ ಪಡೆದಿರುತ್ತವೆ ಎಂಬುದು ಈಕೆಯ ಕಾವ್ಯದ ಗುಣಾತ್ಮಕತೆಯನ್ನು ಪ್ರತಿನಿಧಿಸುತ್ತದೆ.

ಸದ್ಯದ ಆತ್ಮಕತೆ ‘ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’ಯ ಬಗೆಗೆ ಹೇಳುವುದಾದರೆ, ಈ ಪುಸ್ತಕವು ಮಹಿಳಾ ಸಾಹಿತ್ಯದ ಸೂಜಿಗಲ್ಲು ಎಂದೇ ಗುರುತಿಸಲಾಗಿದೆ. ಪ್ರತಿ ವರ್ಷವೂ ಹೊಸ ಭಾಷೆಗಳಿಗೆ ಅನುವಾದವಾಗುತ್ತ ಲಕ್ಷಾಂತರ ಪ್ರತಿ ಮಾರಾಟವನ್ನು ಕಾಣುತ್ತಲೇ ಇರುವ ಪುಸ್ತಕವಾಗಿದೆ.

ಆಫ್ರಿಕನ್-ಅಮೆರಿಕನ್ ಮಹಿಳಾ ಸಾಹಿತ್ಯವನ್ನು ಪರಿಚಯಿಸುವ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಮಾಲಿಕೆಯ ಕೊನೆಯ ಪುಸ್ತಕವಾಗಿ ಇದನ್ನು ಪ್ರಕಟಿಸುತ್ತಿರುವುದು ಮಾಲಿಕೆಯ ಸಾಂಕೇತಿಕ ಅರ್ಥವನ್ನು ಹೆಚ್ಚಿಸಿದೆ. ‘ಕತ್ತಲ ಹೂವಿನ ಹಾಡು’, ‘ಕಪ್ಪು ಹಕ್ಕಿಯ ಬೆಳಕಿನ ಹಾಡು’, ‘ಉತ್ತರ ನಕ್ಷತ್ರ’, ‘ನನ್ನ ಕಥೆ’ ಈ ಮಾಲಿಕೆಯ ಇತರ ಪುಸ್ತಕಗಳಾಗಿವೆ. ಒಂದು ಜನಾಂಗದ, ಅದರಲ್ಲೂ ಮಹಿಳೆಯರ ಕಾವ್ಯ, ಜೀವನ, ಆತ್ಮಕಥೆಗಳನ್ನು ಒಳಗೊಂಡ ಈ ಬಗೆಯ ಪ್ರಯತ್ನದ ಹೆಚ್ಚುಗಾರಿಕೆಯ ಕುರಿತು ಹೇಳುವ ಅವಶ್ಯಕತೆಯಿಲ್ಲ. ಅತ್ಯುತ್ತಮ ಗುಣಮಟ್ಟದ ಸಾರವನ್ನು ಒಳಗೊಂಡ ಸರಿಸುಮಾರು ಒಂದು ಸಾವಿರ ಪುಟಗಳು ಕನ್ನಡ ಭಾಷೆಗೆ ಎಲ್ಲ ರೀತಿಯಲ್ಲೂ ಅಗತ್ಯವೇ.

View full details

Talk about your brand

Share information about your brand with your customers. Describe a product, make announcements, or welcome customers to your store.