ಶ್ರೀಮದ್ಭಾಗವತವನ್ನು ಮೊತ್ತ ಮೊದಲು ಹೇಳಿದವರು ತಂದೆ ವೇದವ್ಯಾಸರು. ಕೇಳಿದವರು ಮಗ ಶುಕಮುನಿ. ಇದೊಂದು ತಂದೆ - ಮಕ್ಕಳ ಸಂಯುಕ್ತ ಕೊಡುಗೆ. ಮತ್ತೆ ಶುಕಮುನಿಯಿಂದ ಪರೀಕ್ಷಿತ್ ಪಡೆದ. ಇದೇ ಸಪ್ತಾಹದ ನಾಂದಿ. ಏಳು ದಿನ ಕೇಳುವುದೆಂದರೆ ಬದುಕಿನುದ್ದಕ್ಕು ಕೇಳುವುದೆಂದೇ ಅರ್ಥ :.
ಭಾಗವತ ಒಂದು ರಸದ ಹಣ್ಣು. ಎಲ್ಲಿ ಸವಿದರೂ ಸವಿ. ಇಲ್ಲಿ ಸಿಪ್ಪೆಯಿಲ್ಲ; ಗೊರಟು ಇಲ್ಲ; ಇರುವುದೆಲ್ಲ ಬರಿಯ ತಿರುಳು.