K V Iyer
ಸಮುದ್ಯತಾ
ಸಮುದ್ಯತಾ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 260
Type - Paperback
Couldn't load pickup availability
'ಸಮುದ್ಯತಾ' ಅಯ್ಯರ್ ಅವರ ಸಣ್ಣ ಕಥೆಗಳ ಸಂಗ್ರಹ, ಒಟ್ಟು ಹನ್ನೊಂದು ಕಥೆಗಳಿವೆ. ಅವು ಹಳೆಯವು ಎನಿಸಬಹುದು, ಪೇಲವ ಎನಿಸಬಹುದು. ಆದರೆ ಕಥೆಗಾರಿಕೆ ಎಂದಿಗೂ ಹಳಸದು. ಅವರ ಕಥೆನ ಕಲೆಯ ಕೆಲವಾರು ಅಂಶಗಳೂ ಇಂದಿಗೂ ಆಕರ್ಶಕವಾಗಿವೆ. ಅವರ ಕಥೆಗಳ ನಿರೂಪಣಾ ತಂತ್ರ ಮಾಸ್ತಿಯವರ ಕಥನ ವಿಧಾನವನ್ನು ನೆನೆಪಿಗೆ ತರುತ್ತದೆ. ಇವರ ಕಥೆಗಳು ದೀರ್ಘವಾಗಿರಲು ನಿರೂಪಣಾ ವಿಧಾನವೂ ಕಾರಣ. ಕಥಾವಸ್ತು ಹಿಂದಿನದಾಗಿರಲಿ ನಿರೂಪಕನ ಕಾಲದ್ದಾಗಿರಲಿ ವಾತಾವರಣಸೃಷ್ಟಿ ಪರಿಣಾಮಕಾರಿಯಾಗಿರುತ್ತದೆ, ಸಂಕ್ಷಿಪ್ತತೆ, ಘಟನೆಗಳ ಕ್ಷಿಪ್ರತೆಗಿಂತ ವಿವರ ವರ್ಣನೆಗಳು ಅವರಿಗೆ ಒಗ್ಗಿದ ರೀತಿ. ಇದರಿಂದ ಸೂಚ್ಯತೆಗೆ ಧಕ್ಕೆಯಾಗುವ ಸಂಭವವುಂಟೆಂಬುದು ನಿಜ. ಆದರೆ ಅವರು ಆರಿಸಿಕೊಳ್ಳುವ ವಸ್ತುವಿಗೆ ಇಂತಹ ನಿರೂಪಣೆ ಹೊಂದಿಕೊಳ್ಳುತ್ತದೆ. ಅವರ ಕಥನ ವಿಧಾನದ ಇನ್ನೊಂದು ವಿಶೇಷವೆಂದರೆ, ಪ್ರಾರಂಭದಲ್ಲಿನ ಒಂದೆರೆಡು ಹೇಳಿಕೆ ಮತ್ತು ಘಟನೆಯ ಸೂಚನೆಯಿಂದ ಕುತೂಹಲವನ್ನು ಕೆರಳಿಸಿ ಮುಕ್ತಾಯದವರೆಗೂ ಸ್ವಾರಸ್ಯವನ್ನು ಉಳಿಸಿಕೊಂಡು ಹೋಗುವುದು. ಇಡೀ ವಾತಾವರಣದ ಜೊತೆಗೆ ಆ ಹಿನ್ನೆಲೆಯಲ್ಲಿ ಮುಖ್ಯಪಾತ್ರಗಳು ಶಿಲ್ಪ ಕೆತ್ತಿದಂತೆ ಸ್ಪುಟಗೊಳ್ಳುತ್ತವೆ. ಕೆಲವು ಕಥೆಗಳಲ್ಲಿ ಒಂದೊಂದು ಪ್ರಧಾನ ಪಾತ್ರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತದೆ.
ಹೀಗಾಗಿ ಅವರ ಕಥೆಗಳಲ್ಲಿ, ವಸ್ತುವಿನಲ್ಲಿ ವೈವಿಧ್ಯವಿದ್ದರೂ ವಾತಾವರಣ ಸೃಷ್ಟಿ ಹಾಗೂ ಪಾತ್ರಗಳು ಗಮನ ಸೆಳೆದು ಕಥಾವಸ್ತು ಎಷ್ಟು ಪ್ರಸ್ತುತ ಎಂಬುದು ಗೌಣವಾಗುತ್ತದೆ. ಆ ಕಾರಣವಾಗಿಯೇ ಕಥೆಗಳು ಸ್ವಾರಸ್ಯ ಕಳೆದುಕೊಳ್ಳುವುದಿಲ್ಲ.
-ಪ್ರೊ. ಎಂ. ಎಚ್. ಕೃಷ್ಣಯ್ಯ
Share

Subscribe to our emails
Subscribe to our mailing list for insider news, product launches, and more.