Skip to product information
1 of 2

B. Suresh

ಸಡಗರಕ್ಕೆ ಸಾವಿಲ್ಲ

ಸಡಗರಕ್ಕೆ ಸಾವಿಲ್ಲ

Publisher - ಕಾನ್‌ಕೇವ್ ಮೀಡಿಯಾ

Regular price Rs. 480.00
Regular price Rs. 480.00 Sale price Rs. 480.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಪುಸ್ತಕದಲ್ಲಿ ರಂಗಭೂಮಿ ಕುರಿತ ಲೇಖನಗಳಿವೆ; ರಂಗಚಿಂತನೆ, ರಂಗವಿಮರ್ಶೆ, ರಂಗಭೂಮಿಯ ಒಡನಾಡಿಗಳನ್ನು ಕುರಿತ ವ್ಯಕ್ತಿಚಿತ್ರಗಳು, ಅಲ್ಲದೆ ಹಲವೆಡೆ ಆಡಿದ ಮಾತುಗಳನ್ನು ಅಕ್ಷರವಾಗಿಸಿರುವ ಲೇಖನಗಳಿವೆ. ಇವುಗಳು ವಿಭಿನ್ನ ಕಾಲಘಟ್ಟದಲ್ಲಿ ಬೇರೆ ಬೇರೆ ಸಂದರ್ಭಗಳಿಗಾಗಿ ಬರೆದ ಲೇಖನಗಳು. ಈ ಲೇಖನಗಳಲ್ಲಿರುವ ಹಲವು ಅಭಿಪ್ರಾಯಗಳು ಆಯಾ ಕಾಲದ್ದು. (ಆಯಾ ಲೇಖನಗಳು ಯಾವಾಗ, ಎಲ್ಲಿ ಪ್ರಕಟವಾದವು ಅಥವಾ ಎಲ್ಲಿ ಮಾಡಿದ ಭಾಷಣ ಎಂಬ ವಿವರಗಳನ್ನು ಫುಟ್ ನೋಟ್ ಗಳಲ್ಲಿ ಗಮನಿಸಬಹುದು.) ಕಾಲಾಂತರದಲ್ಲಿ, ತಿಳಿವು ಮೂಡಿದಂತೆ ನನ್ನ ಹಲವು ನಿಲುವುಗಳು ಬದಲಾಗಿವೆ. ನಾನು ಆಗ ಬರೆದ - ಆಡಿದ ಮಾತುಗಳನ್ನು ಇಂದು ಒಪ್ಪದಿರಬಹುದು. ಆದರೂ ಯಾವ ಮಾತನ್ನೂ ಬದಲಿಸದೆ ಅಂದಿನ ಆ ಮಾತುಗಳನ್ನು ಹಾಗೆಯೇ ಇರಿಸಿ ಇಲ್ಲಿ ಪ್ರಕಟಿಸಲಾಗಿದೆ. 

ಹಾಗೆಯೇ, ಮಾತಿನಿಂದ ಅಕ್ಷರವಾದ ಹಲವು ಲೇಖನಗಳಲ್ಲಿ ಯಾವುದೋ ವಿವರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಪಟ್ಟಿಯನ್ನು ಮಾಡುವಾಗ ಕೆಲವು ಮುಖ್ಯ ಹೆಸರು ಬಿಟ್ಟಿರಬಹುದು. ಅದು ಆ ಮಾತು ಕಟ್ಟುವ ಕ್ಷಣದಲ್ಲಿ ಆಗಿರಬಹುದಾದ್ದು. ಪ್ರಾಯಃ ಲೇಖನವಾಗಿ ಬರೆದಿದ್ದರೆ ಹೆಸರುಗಳು ತಪ್ಪುತ್ತಾ ಇರಲಿಲ್ಲವೇನೋ ಅಥವಾ ಕೆಲವು ಹೇಳಿಕೆಗಳು ಬದಲಾಗುತ್ತಿದ್ದವೇನೋ. ಅಂತಹ ಹಲವು ಸ್ಥಳಗಳಲ್ಲಿ ತಿದ್ದುಪಡಿ ಮಾಡದೆ ಆಗ ಏನು ಮಾತಾಡಿದ್ದೇನೋ ಹಾಗೆಯೇ ಈ ಪ್ರಕಟಣೆಯಲ್ಲಿ ಇರಿಸಲಾಗಿದೆ. 

ಇಂತಹ ಲೇಖನಗಳ ಸಂಗ್ರಹ ತರುವಾಗ ಪುಸ್ತಕದ ಗಾತ್ರದ ದೃಷ್ಟಿಯಿಂದ ಕೆಲವು ಲೇಖನಗಳನ್ನು ಕತ್ತರಿಸಿದ್ದೇವೆ. ಅದಕ್ಕೆ ಪುಸ್ತಕದ ಗಾತ್ರವಷ್ಟೇ ಕಾರಣ. ಮುಂದೆಂದಾದರೂ ಇಲ್ಲಿ ಬಳಸದ ಮತ್ತು ಈ ಸಂಗ್ರಹ ಆದ ನಂತರ ಬರೆದಿರುವ ಇನ್ನೂ ಹಲವು ಲೇಖನಗಳನ್ನು ಸೇರಿಸಿ ಪುಸ್ತಕ ಮಾಡುವ ಕಾಲ ಬಂದರೆ ಆಗ ಕೈಬಿಟ್ಟ ಲೇಖನಗಳನ್ನು ಸೇರಿಸುವ ಪ್ರಯತ್ನ ಮಾಡಬಹುದೇನೋ, ನೋಡುವ.

View full details

Talk about your brand

Share information about your brand with your customers. Describe a product, make announcements, or welcome customers to your store.