Rangaswamy Mookanahalli
ಸಾಲ
ಸಾಲ
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 168
Type - Paperback
Couldn't load pickup availability
ಇವತ್ತು ಜಗತ್ತು ನಿಂತಿರುವುದು ಸಾಲದ ಮೇಲೆ! ನೀವು ಗಮನಿಸಿ ನೋಡಿ, ಜಗತ್ತಿನಲ್ಲಿ ಅತಿ ದೊಡ್ಡ ಉತ್ಪಾದನಾ ಘಟಕಗಳಿವೆ. ಅಲ್ಲಿ ಅವರು ನಿಮ್ಮ ಬದುಕಿಗೆ ಬೇಕಾದ ವಸ್ತುಗಳಿಗಿಂತ ಬೇಡವಾದ ವಸ್ತುಗಳನ್ನು ಉತ್ಪಾದಿಸುತ್ತಾರೆ. ಅದನ್ನ ನಿಮಗೆ ಮಾರಲು ಮಾರ್ಕೆಟಿಂಗ್ ತಂತ್ರವನ್ನು ಅನುಸರಿಸುತ್ತಾರೆ. ನಿಮ್ಮ ಬಳಿ ಹಣವಿಲ್ಲದದ್ದಿರೆ ನಿಮಗೆ ಸಾಲ ನೀಡುತ್ತಾರೆ. ಸಾಲ ನೀಡಿದ ಹಣದಲ್ಲಿ ನಿಮ್ಮಿಂದ ಖರ್ಚು ಮಾಡಿಸಿ ಅದೇ ಹಣವನ್ನು ಮತ್ತೆ ತಮ್ಮ ಬಳಿಗೆ ತರಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿಲ್ಲದೇ ನೀವು, ನಿಮಗೆ ಬೇಡವಾದ ವಸ್ತುವನ್ನು ಕೊಂಡು ಸಾಲಗಾರರಾಗುತ್ತೀರಿ. ಅದಕ್ಕೆ ಕಂತು ಕಟ್ಟುತ್ತೀರಿ, ಕಂತು ಕಟ್ಟಲು ವೇತನಕ್ಕೆ ಮತ್ತೆ ಅವರ ಬಳಿ ದುಡಿಯುತ್ತೀರಿ. ನಿಮ್ಮ ಸಮಯ ಎನ್ನುವುದನ್ನು ಅವರಿಗೆ ಒತ್ತೆ ಇಡುತ್ತೀರಿ. ಇಷ್ಟೆಲ್ಲಾ ಮಾಡಿ ಸುಸ್ತಾಗಿ ಬಂಡವಾಳಶಾಹಿಗಳು ಕಟ್ಟಿದ ರೆಸಾರ್ಟ್ನಲ್ಲಿ ವಿಶ್ರಮಿಸುತ್ತೀರಿ. ಎಲ್ಲವನ್ನೂ ಮಾಡುತ್ತೀರಿ ಆದರೆ `ನಿಮಗೆ ಬೇಕಾದ ಬದುಕನ್ನು ನೀವು ಬದುಕಿದಿರಾ?' ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಗುವುದಿಲ್ಲ. ಏಕೆಂದರೆ ಇಂಟರ್ನೆಟ್, ಬದುಕು, ಯಶಸ್ಸು, ಹಣ ಇವುಗಳ ಹಿಂದಿನ ಓಟದಲ್ಲಿ ನಮ್ಮೊಂದಿಗೆ ನಾವು ಸಂವಹನ ನಡೆಸುವುದು ಬಿಟ್ಟು ದಶಕಗಳು ಮಾತ್ರ ಸದ್ದಿಲ್ಲದೇ ಕರಗಿ ಹೋಗಿದೆ. ಸಾಲ ಮಾಡುವುದು ತಪ್ಪಲ್ಲ. ಲಿವರೇಜ್ ಶಕ್ತಿಯ ಅರಿವಿಲ್ಲದೆ ಸಾಲ ಮಾಡುವುದು ಅಪರಾಧ. ಈ ಪುಸ್ತಕದಲ್ಲಿ ನಿಮಗೆ ಲಿವರೇಜ್ ಶಕ್ತಿಯ ಪರಿಚಯ ಮಾಡುವ ಪ್ರಯತ್ನವಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.