Padachihna
ರೆಸ್ಟ್ ಇನ್ ಪೀಸ್
ರೆಸ್ಟ್ ಇನ್ ಪೀಸ್
Publisher - ಸಾವಣ್ಣ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 160
Type - Paperback
Couldn't load pickup availability
ತುಂಬಾ ಬೇಗ ಏನಾದರೂ ಸಾಧಿಸಬೇಕು ಎಂದುಕೊಂಡವರಿಗೆ ಜೀವನ ಒಂದು ರೇಸ್.
ತುಂಬಾ ದೂರ ಸಾಗಬೇಕು ಎಂದುಕೊಂಡವರಿಗೆ ಜೀವನ ಮ್ಯಾರಥಾನ್.
ಎಲ್ಲವನ್ನೂ ನೋಡಿದ್ದೇನೆ ಎಂದುಕೊಂಡವರಿಗೆ ಜೀವನ ನಶ್ವರ.
ಅಧ್ಯಾತ್ಮದ ಕಡೆಗೆ ಒಲವಿರುವವರಿಗೆ ಜೀವನ ಮುಕ್ತಿಯ ದಾರಿ.
ಏನೂ ಪಡೆದಿಲ್ಲ ಎಂಬ ಭಾವನೆ ಇರುವವರಿಗೆ ಜೀವನವೇ ಒಂದು ಶಿಕ್ಷೆ.
ಸದಾ ಇನ್ನೇನನ್ನೋ ಬಯಸುವವರಿಗೆ ಜೀವನ ಕುತೂಹಲವೂ ಹೌದು ಕನ್ಫ್ಯೂಷನ್ ಕೂಡ ಹೌದು.
ಆಟವಾಡುವ ಮಗುವಿಗೆ ಸಂಭ್ರಮ, ಓದುವ ಯುವಕನಿಗೆ ಅನಿಶ್ಚಿತತೆ, ಇನ್ಯಾರಿಗೋ ಇದು ಕನಸು, ವೃದ್ಧರಿಗೆ ಸಮಾಧಾನ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದರ್ಶನ ನೀಡುವ ಜೀವನ ಏನು ಎನ್ನುವುದಕ್ಕೆ ಉತ್ತರವೂ ಹಲವು.
ಏನೋ ಆಸೆ, ಏನೋ ಬಯಕೆ, ಇನ್ನೇನೋ ಹಟ, ಮತ್ತೇನೋ ಹಂಬಲ, ಆಗಾಗ ತಳಮಳ, ಚಿಟಿಕೆಯಷ್ಟು ಭಯ, ಒಂದಿಷ್ಟು ಖುಷಿ, ಹೆಚ್ಚು ದುಃಖ ಎಲ್ಲವೂ ಜೀವನವೇ!
ಅದೇನೇ ಇದ್ದರೂ ಎಲ್ಲೋ ಸಾಗುತ್ತಿರುವುದು ಸತ್ಯ, ಏನೋ ಹುಡುಕುತ್ತಿರುವುದು ಸತ್ಯ. ಆ ಹುಡುಕಾಟದಲ್ಲಿ, ನಿಲ್ಲದೇ ಓಡುವ ಗಡಿಯಾರದ ಮುಳ್ಳಿನಂತೆ ಸಾಗುವ ಪಯಣದಲ್ಲಿ ಬಹಳ ಮುಖ್ಯವಾಗಿ ಮರೆಯುವುದೇನೆಂದರೆ ವಿಶ್ರಾಂತಿ! ಸಾವಿನ ಮನೆಯೊಳಗೆ ಹೋದ ಜೀವಕ್ಕೆ ಮಾತ್ರ ರೆಸ್ಟ್ ಇನ್ ಪೀಸ್ ಹೇಳುವ ನಾವು ಬದುಕಿನ ಪ್ರತಿ ಹಂತದಲ್ಲೂ ರೆಸ್ಟ್ ಮಾಡಲು ಮರೆಯುವುದೇಕೆ? ಸಣ್ಣ ವಿರಾಮ ಪಡೆದು ಟೇಕ್ ಕೇರ್ ಎಂದು ನಮಗೆ ನಾವು ಹೇಳಲು ಮರೆಯುವುದೇಕೆ?
ಈ ಪ್ರಶ್ನೆಯ ಹುಡುಕಾಟದಲ್ಲಿರುವ ಮನಸ್ಸಿನಿಂದ ಬರೆದ ಕೃತಿಯಿದು.
ಸಾವಧಾನ ಮನಸೇ!
ಟೇಕ್ ಕೇರ್!
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.