Vidhi Hemanth
ಪುಟ್ಟ ಗೌರಿ ಜೊತೆ ಪುಟ್ಟ ಗಣಪ
ಪುಟ್ಟ ಗೌರಿ ಜೊತೆ ಪುಟ್ಟ ಗಣಪ
ಪ್ರಕಾಶಕರು - ಹರಿವು ಬುಕ್ಸ್
- Free Shipping Above ₹400
- Cash on Delivery (COD) Available
Pages - 24
Type - Paperback
Couldn't load pickup availability
ಅರೆ ಮಲೆನಾಡಿನ ಭದ್ರಾವತಿ ನನ್ನ ಊರು. ಸ್ನಾತಕೋತ್ತರ ಪದವಿ ಪಡೆದಿದ್ದು ವಿಜ್ಞಾನ ವಿಭಾಗದಲ್ಲಿ, ಪುಟಾಣಿಗಳಿಗೆ ಶಿಕ್ಷಕಿಯಾಗಿ ಪಾಠ ಮಾಡುತ್ತಿರುವುದು ಕೂಡ ವಿಜ್ಞಾನವೇ ಆದರೂ, ಸಾಹಿತ್ಯ ನನ್ನ ಆಸಕ್ತಿಯ ಕ್ಷೇತ್ರ ಓದಿನ ಪಯಣ ಶುರುವಾಗಿದ್ದು ಸಾಯಿಸುತೆ, ತ್ರಿವೇಣಿ ಅವರುಗಳ ಪುಸ್ತಕದಿಂದ ಆದರೂ, ತೇಜಸ್ವಿಯವರ ಬರಹಗಳು ತುಂಬಾ ಪ್ರಭಾವಿಸಿವೆ. ಬದುಕಿನ ಎಲ್ಲಾ ಹಂತಗಳಲ್ಲೂ ಪುಸ್ತಕವನ್ನು ಜೊತೆ ಮಾಡಿಕೊಂಡವಳಿಗೆ ಎಲ್ಲೋ ಒಂದು ಕಡೆ ನಾಲ್ಕು ಅಕ್ಷರವನ್ನು ಬರೆಯುವ ಆಸೆ ಕೂಡ ಅವಾಗವಾಗ ಮೂಡುತ್ತಿತ್ತು. ನಾನೇ ಪುಟ್ಟ ಪುಟ್ಟ ಎರಡು ಮಕ್ಕಳ ತಾಯಿಯಾದ ಮೇಲೆ ಅದಕ್ಕೊಂದು ಮೂರ್ತ ರೂಪ ಸಿಕ್ಕಿತು. ಹಾಗೆ ಮೂಡಿಬಂದ ನನ್ನ ಮೂರನೇ ಕೂಸು 'ಪುಟ್ಟ ಗೌರಿ ಜೊತೆ ಪುಟ್ಟ ಗಣಪ", 'ಮನೆಯಲ್ಲಿ ಗಂಡು ಪೋರ, ಕೊಟ್ಟಿಗೆಯಲ್ಲಿ ಹೆಣ್ಣು ಕರು ಹುಟ್ಟಿದರೆ ಚಂದ" ಅನ್ನೋದು ದೊಡ್ಡವರ ವ್ಯವಹಾರ ಲೋಕದ ಮಾತು. ಆದರೆ ಮಕ್ಕಳ ಮನಸ್ಸಿಗೆ ಈ ವ್ಯವಹಾರ, ಲಾಭ-ನಷ್ಟದ ಸೋಂಕಿಲ್ಲ. ಅವರ ಲೋಕದಲ್ಲಿ ಮನುಷ್ಯರು, ಪ್ರಾಣಿಗಳು, ಹೆಣ್ಣು-ಗಂಡು ಎಲ್ಲಾ ಒಂದೇ.0 ಹಾಗಾಗಿಯೇ ಈ ಪುಟ್ಟ ಗೌರಿಗೆ ಕೊಟ್ಟಿಗೆಯ ಗಣಪನನ್ನು ಕಂಡರೆ ಜೀವ ಆದರೆ ದೊಡ್ಡವರ ಸಣ್ಣತನದಿಂದ ಗಣಪನಿಂದ ದೂರವಾಗುವ ಭಯ... ಮುಂದೇನಾಗುತ್ತದೆ ಅನ್ನುವುದನ್ನು ಪುಟಾಣಿ ಗೌರಿ-ಗಣಪನ ಕತೆಯನ್ನು ಓದಿ ತಿಳಿದುಕೊಳ್ಳಿ...

ಮಕ್ಕಳಿಗೆ ಬಹಳ ಸುಲಭವಾಗಿ ಅರ್ಥ ಆಗುವಂತಹ ಕಥೆ... ಸಿರಿ ಕಥೆ ಹೇಳ್ತಾ ಇದ್ದ ಹಾಗೆ ಮನೆಯ ಮಗುವೊಂದು ನಮ್ಮ ಜೊತೆಯೇ ಮಾತಾಡ್ತಾ ಇದೆಯೇನೋ ಅನಿಸುವಷ್ಟು ಆಪ್ತ ಅನಿಸಿಬಿಡುತ್ತದೆ...
ಪುಸ್ತಕದ ಮೇಲಿರುವ ಬಣ್ಣ ಬಣ್ಣದ ಚಂದದ ಚಿತ್ರಗಳು ನಮ್ಮನ್ನು ಸೆಳೆಯೋದು ಖಂಡಿತ...
ಪುಟ್ಟ ಗೌರಿ ಜೊತೆ ಪುಟ್ಟ ಗಣಪ ತುಂಬಾ ಚಂದದ ಪುಸ್ತಕ... ಹಳ್ಳಿಯ ವಾತಾವರಣ ಹೊಂದಿರುವ ಕಥೆಯಾಗಿರೋದ್ರಿಂದ ಇನ್ನು ತುಂಬಾನೇ ಆಪ್ತ ಅನ್ನಿಸ್ತು... ಚಿಕ್ಕ ಮಕ್ಕಳ ಜೊತೆಗೆ ನಾವು ಮಕ್ಕಳ ಹಾಗೇ ಓದಿ ಖುಷಿಪಟ್ಟೇವು... ಹೀಗೆ ಇನ್ನು ಹೆಚ್ಚೆಚ್ಚು ಪುಸ್ತಕಗಳನ್ನ ಬರೆಯಿರಿ...
Nice book for children. Relatable to dailyday life in villages.
Photos are the best.
ಪುಟ್ಟ ಗೌರಿ ಜೊತೆ ಪುಟ್ಟ ಗಣಪ
Subscribe to our emails
Subscribe to our mailing list for insider news, product launches, and more.