Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಮನುಷ್ಯ ಪ್ರೀತಿಯ ಕವಲುಗಳು ಸಾವಿರ. ಅದು ಒಂದಕ್ಕೆ ಸೀಮಿತವಾಗಿಲ್ಲ. ಅಂತಹ ನೂರಾರು ಕವಲುಗಳು ಇಲ್ಲಿರುವ ನೂರಾರು ಕವಿತೆಗಳು. ಸೃಷ್ಟಿಯ ಜೊತೆಗೆ ಅಂತರ್ಗತವಾಗಿರುವ ಮನುಷ್ಯ ಪ್ರೀತಿಯು ಸನ್ನಿವೇಶಗಳ ಜೊತೆಗೆ ಹೆಣೆದು ಕೊಳ್ಳುವ ಸಂಬಂಧಗಳು, ಅವುಗಳೊಂದಿಗಿನ ಒಡನಾಟ ಮತ್ತು ಬಿಡುಗಡೆಗಳ ಹಲವಾರು ಚಿತ್ರಗಳನ್ನು ಕವಿತೆಗಳು ಇಲ್ಲಿ ಕಟ್ಟಿಕೊಟ್ಟಿವೆ. ಧಾರಾಳವಾಗಿ ಹುಟ್ಟಿ ಸಂಕುಚಿತವಾಗಿ ಮಾರ್ಪಟ್ಟು ಕಡೆಗೆ ಏಕಾಂತ ಬಯಸಿ ಹೊರಡುವುದು ಮತ್ತೆ ಅಲ್ಲೆಲ್ಲೋ ಆದರದ ಒರತೆಯನ್ನು ಕಂಡು ನಿಲ್ಲುವುದು.. ನಿಂತ ಕಡೆ ಆಲದ ಮರದ ಹಾಗೇ ಬೆಳೆದು విఠాలవాగి ಹಬ್ಬಿಕೊಳುವುದು ಪ್ರೀತಿಯ ಗುಣ.
ಪ್ರೀತಿ ಎಂಬುದು ಇಲ್ಲಿ ಹೆಣ್ಣು-ಗಂಡಿನ ಪ್ರೇಮಕ್ಕೆ ಸೀಮಿತವಾಗಿಲ್ಲ. ಅದನ್ನು ಮೀರಿಕೊಂಡು ಕುಟುಂಬ, ಸಮಾಜ, ಗೆಳೆತನ, ಪರಿಸರ, ಪರಂಪರೆಯಾದಿಯಾಗಿ ಎಲ್ಲವುಗಳೊಂದಿಗೆ ಬೆಸುಗೆಗೊಳ್ಳುತ್ತಾ ಬೆಳಕಿನ ರೇಖೆಗಳಂತೆ ಮುನ್ನುಗ್ಗುತ್ತಿವೆ. ಅಲ್ಲಲ್ಲಿ ಮನಸಿನ ಹಳಹಳಿಕೆಗಳು, ಪ್ರಾಪ್ತನೊಬ್ಬನ ಕನಸುಗಳು ಕೂಡ ಕೇಳಬಹುದು. ಹೀಗೇ ಕೊನೆಯೇ ಇರದ ಸಂಗಾತಗಳಲಿ ಕಂಡುಕೊಂಡ ಸಂತಸ ಮತ್ತು ಸಂಕಟಗಳೆರಡರ ಸಂಕಲನ ಈ ಕವಿತೆಗಳು.
Be the first to know about new collections and special offers.