Jogi
ಪ್ರೀತಿಸುವವರನ್ನು ಕೊಂದುಬಿಡಿ
ಪ್ರೀತಿಸುವವರನ್ನು ಕೊಂದುಬಿಡಿ
Publisher - ಸಾವಣ್ಣ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 203
Type - Paperback
Couldn't load pickup availability
ಪ್ರೀತಿಸುವವರನ್ನು ಕೊಂದುಬಿಡಿ ಎಂಬ ಟೈಟಲ್ ನೋಡಿದಾಗ ರೋಮಾಂಚನವಾಯಿತು. ಈ ಶೀರ್ಷಿಕೆಯೇ ವಿಚಿತ್ರವಾಗಿದೆ. ಓದಲೇಬೇಕು. ಅನ್ನಿಸುವಂತಿದೆ. ಇದರೊಳಗೆ ಏನಿರಬಹುದು ಎಂಬ ಕುತೂಹಲ ಹುಟ್ಟುತ್ತದೆ. ಇಂಥದ್ದೊಂದು ಟೈಟಲ್ ಇಡುವುದು ಕಷ್ಟ, ಪ್ರೀತಿಯ ಬಗ್ಗೆ ತುಂಬ ತಿಳಿದುಕೊಂಡು ಇದನ್ನು ಜೋಗಿ ಬರೆದಿದ್ದಾರೆ ಅನ್ನಿಸುತ್ತೆ.
ನಾನೂ ಕೂಡ ಪ್ರೀತಿಯ ಬಗ್ಗೆ ತುಂಬಾ ಬರೆದಿದ್ದೆ. ಪ್ರೀತಿ ಅಂದ್ರೆ ಪುಸ್ತಕದ ಬದನೆಕಾಯಿ ಎಂದೆಲ್ಲ ಬೈದಿದ್ದೆ. ಪ್ರೀತೀನ ಸಾಯಿಸಬೇಕು ನಿಜ, ಪ್ರೀತಿಸಿದವರನ್ನೇ ಸಾಯಿಸಬೇಕಾ ಅನ್ನೋದು ಮತ್ತೊಂದು ಹೆಜ್ಜೆ. ಹಾಗಿದ್ದರೆ ಸಿಗರೇಟನ್ನು ಸಾಯಿಸಬೇಕಾ, ಸಿಗರೇಟು ಸೇದೋರನ್ನು ಸಾಯಿಸಬೇಕಾ ಎಂಬ ಪ್ರಶ್ನೆ ಬರುತ್ತೆ. ಪ್ರತಿಯೊಬ್ಬರೊಳಗೂ ಸಿಗರೇಟನ್ನು ಪ್ರೀತಿಸೋನು ಇರ್ತಾನೆ, ಅವನನ್ನು ಸಾಯಿಸಬೇಕು ಅನ್ನುವ ಅರ್ಥವೂ ಇರಬಹುದು.
ಪ್ರೀತಿ ಅನ್ ಕಂಡೀಷನಲ್ ಆಗಿರಬೇಕು ಅಂತಾರೆ. ಆದರೆ ಅನ್ ಕಂಡೀಷನಲ್ ಪ್ರೀತಿ ಅನ್ನೋದು ಇಲ್ಲವೇ ಇಲ್ಲ. ಬಹುಶ: ತಾಯಿ ಮಗು ಪ್ರೀತಿ ಮಾತ್ರ ಅನ್ಕಂಡೀಷನಲ್ ಇರಬಹುದು.
ಪ್ರೀತಿಸೋದೂ ಸ್ವಾರ್ಥದಿಂದಲೇ ನಿಸ್ವಾರ್ಥ ಪ್ರೀತಿ ಇರೋದಕ್ಕೆ ಸಾಧ್ಯವೇ ಇಲ್ಲ ಅನ್ನಿಸಿ ನಾನು ಹಾಲಿವುಡ್ ಚಿತ್ರದಲ್ಲಿ ಐ ಯೂ ಅಂತ ಒಂದು ಹಾಡು ಬರೆದೆ ಇಲ್ಲಿರುವ ಡ್ಯಾವ್ ಬದಲು ಏನು ಹೇಳಬೇಕು ಅಂತ ನನಗೆ ಗೊತ್ತಿಲ್ಲ.
ಆದರೆ ಪ್ರೀತಿ ಅನ್ ಕಂಡೀಷನಲ್ ಆದಾಗ ನಾವೆಲ್ಲ ನಿಜವಾಗ್ಲ ಸಂತೋಷವಾಗಿರ್ತೀವಿ ಹಾಗೆ ಪ್ರೀತಿಸೋದು ಎಲ್ಲರಿಗೂ ಸಾಧ್ಯವಾಗಲಿ.
-ಪ್ರಶಾಂತ್ ಭಟ್
Share

Subscribe to our emails
Subscribe to our mailing list for insider news, product launches, and more.